ದಾಂಡೇಲಿ : ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರು ನಾಪತ್ತೆಯಾದ ಘಟನೆ ದಾಂಡೇಲಿ ನಗರದ ಸುಭಾಷ್ ನಗರದಲ್ಲಿ ನಡೆದಿದ್ದು, ಈ ಬಗ್ಗೆ ಇಂದು ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಸುಭಾಷ್ ನಗರದ ನಿವಾಸಿಯಾಗಿರುವ 63 ವರ್ಷ ವಯಸ್ಸಿನ ರಮ್ಜಾನಬಿ ಎಂಬವರೇ ನಾಪತ್ತೆಯಾಗಿರುವ ವೃದ್ಧೆ ಮಹಿಳೆಯಾಗಿದ್ದಾರೆ. ಇವರು ನಿನ್ನೆ ಸಂಜೆ ಗಾಂಧಿನಗರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ನಿನ್ನೆ ರಾತ್ರಿಯಿಂದ ಇಂದು ರಾತ್ರಿಯವರೆಗೆ ನಗರದ ವಿವಿಧ ಕಡೆಗಳಲ್ಲಿ ಎಷ್ಟೇ ಹುಡುಕಾಡಿದರೂ ಇವರ ಪತ್ತೆಯಾಗಿಲ್ಲ. ಇವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಇಲ್ಲವೇ ಇವರು ಎಲ್ಲಿಯಾದರೂ ಕಂಡುಬಂದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಇಲ್ಲವೇ ತನಗೆ ಮಾಹಿತಿ ನೀಡುವಂತೆ ನಾಪತ್ತೆಯಾದ ವೃದ್ಧೆಯ ಸಹೋದರಿಯ ಮಗನಾದ ಹಸನಸಾಬ್.ಎಫ್.ನದಾಫ್ ಅವರು ಇಂದು ಭಾನುವಾರ ರಾತ್ರಿ ನಗರದಲ್ಲಿ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ. ನಾಪತ್ತೆಯಾಗಿರುವುದರ ಬಗ್ಗೆ ಈಗಾಗಲೆ ನಗರ ಪೊಲೀಸ್ ಠಾಣೆಗೂ ಮಾಹಿತಿಯನ್ನು ನೀಡಲಾಗಿದೆ.