ರಂಪಾಲಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಸ್ಥಳ ಪರಿಶೀಲನೆ

ಜೋಯಿಡಾ : ಜೋಯಿಡಾ ತಾಲ್ಲೂಕಿನ 5 ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಕುಡಿಯುವ ನೀರಿನ ಅಭಾವವಿರುವ ಹಿನ್ನಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಸ್ಥಳ ಪರಿಶೀಲಿಸುವ ನಿಟ್ಟಿನಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರ ನಿರ್ದೇಶನದಂತೆ ಇಂದು ಶನಿವಾರ ಸ್ಥಳ ಪರಿಶೀಲನೆ ಕಾರ್ಯ ನಡೆಯಿತು.

ತಾಲ್ಲೂಕಿನ ಪ್ರಧಾನಿ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಬಿರಂಪಾಲಿಯಲ್ಲಿ ಕಾಳಿ ನದಿಯ ಹತ್ತಿರ ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಸ್ಥಳ ಪರಿಶೀಲನೆ ನಡೆಸಲಾಯ್ತು. ಜೋಯಿಡಾ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಇಝಾನ್ ಮಹಮ್ಮದ್ ಸಬೂರ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕನ್ಸಲ್ಟೆನ್ಸಿ ಸಂಸ್ಥೆಯ ಅಭಿಯಂತರರಾದ ಸುಬ್ರಾಯ ಹೆಗಡೆಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ, ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್, ಮಾಜಿ ಜಿ.ಪ.ಸ ರಮೇಶ್ ನಾಯ್ಕ, ಸಾಮಾಜಿಕ ಮುಖಂಡರಾದ ರಫೀಕ್ ಖಾಜಿ, ಮುಖಂಡರುಗಳಾದ ದೇವಿದಾಸ್ ದೇಸಾಯಿ, ಆರೀಶ್ ಖಾದರ್, ರೂಪೇಶ್ ನಾಯ್ಕ, ಸುಭಾಷ್ ವೇಳಿಪ್, ಸುನೀಲ್ ದೇಸಾಯಿ, ನಿಸಾರ್ ಗುತ್ತಾಲ್, ಸತೀಶ್ ನಾಯ್ಕ, ರತನ್ ಕಲಾಲ್, ನಿಲೇಶ್ ದೇಸಾಯಿ, ಸೂರಜ್ ಎಸ್.ಎಚ್, ಗಜಾನನ.ಜಿ.ದೇಸಾಯಿ, ಗಣಪತಿ ದೇಸಾಯಿ ಮೊದಲಾದವರು ಸ್ಥಳದಲ್ಲಿದ್ದು ಅಧಿಕಾರಿಗಳೊಂದಿಗೆ ಪರಸ್ಪರ ಚಚರ್ೆ ನಡೆಸಿದರು.

ಜೋಯಿಡಾ ತಾಲ್ಲೂಕಿನ ಜೋಯಿಡಾ, ಪ್ರಧಾನಿ, ಕುಂಬಾರವಾಡ, ನಾಗೋಡಾ ಮತ್ತು ಗಾಂಗೋಡಾ ಗ್ರಾಮ ಪಂಚಾಯ್ತು ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಅಭಾವವಿರುವ ಹಿನ್ನಲೆಯಲ್ಲಿ ಮೊನ್ನೆ ನಡೆದ ತಾಲೂಕು ಕೆಡಿಪಿ ಸಭೆಯಲ್ಲಿ ಆರ್.ವಿ.ದೇಶಪಾಂಡೆಯವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಎಲ್ಲಾ ಭಾಗಗಳಿಗೆ ಕುಡಿಯುವ ನೀರು ಪೊರೈಕೆ ಮಾಡುವ ನಿಟ್ಟಿನಲ್ಲಿ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ವರದಿ ಸಿದ್ದಪಡಿಸಿಕೊಡುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಂದು ಪರಿಶೀಲನಾ ಕಾರ್ಯ ನಡೆಯಿತು.