ಪಿ.ಎಮ್.ಹೈಸ್ಕೂಲಿನ ಎನ್ .ಸಿ.ಸಿ.ಘಟಕದ ಚಟುವಟಿಕೆಗಳಿಗೆ ಚಾಲನೆ

ಅಂಕೋಲಾ: ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲ್ ಎನ್.ಸಿ.ಸಿ ಘಟಕದ 2023-24ನೇ ಎನ್.ಸಿ.ಸಿ.ಚಟುವಟಿಕೆಗಳಿಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷರಾದ ಮಂಜುನಾಥ ಹರಿಕಂತ್ರ ಉದ್ಘಾಟಕರಾಗಿ ಮಾತನಾಡಿ ಪಿ.ಎಮ್.ಹೈಸ್ಕೂಲಿನ ಎನ್.ಸಿ.ಸಿ.ಘಟಕವು ಎನ್.ಸಿ.ಸಿ.ಘಟಕದ ಚೀಫ್ ಆಫೀಸರ್ ಜಿ.ಆರ್.ತಾಂಡೇಲರವರ ನೇತೃತ್ವದಲ್ಲಿ ಎನ್.ಸಿ.ಸಿ.ಕೆಡೆಟ್‌ಗಳಿಗೆ ಉತ್ತಮ ತರಬೇತಿ ಲಭ್ಯವಾಗುತ್ತಿದೆ.ಕೆಡೆಟ್‌ಗಳು ಉತ್ತಮ ತರಬೇತಿ ಪಡೆದು ಮುಂದೆ ಸೈನಿಕರಾಗಿ ದೇಶ ಸೇವೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಚಂದ್ರಶೇಖರ್ ಕಡೇಮನಿಯವರು ಪಿ.ಎಮ್.ಹೈಸ್ಕೂಲಿಗೆ ಎನ್.ಸಿ.ಸಿ.ಘಟಕವು ಕಿರೀಟವಿದ್ದಂತೆ. ಶಾಲೆಯ ಶಿಸ್ತು ಏಕತೆ ಕಾಪಾಡಲುಮತ್ತು ಸಮಾಜಮುಖಿ ಕೆಲಸ ಮಾಡುವಲ್ಲ ಪೂರ್ವ ಅಧ್ಯಕ್ಷ ಗಣೇಶ ಶೆಟ್ಟಿ ಲಾಯನ್ಸ್ ಹಿರಿಯ ಸದಸ್ಯರಾದ ಮಹಾಂತೇಶ ರೇವಡಿ ಲಾ.ಡಾ. ಕರುಣಾಕರ ನಾಯ್ಕ ಗಣಪತಿ ನಾಯಕ ಶೀಳ್ಯ , ದುರ್ಗಾನಂದ ದೇಸಾಯಿ ದೇವಾನಂದ ಗಾಂವಕರ ರಮೇಶ ಪರಮಾರ ಎನ್.ಸಿ.ಸಿ.ಕೆಡೆಟ್‌ಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ಸಿ.ಸಿ.ಘಟಕದ ಚೀಫ್ ಆಫೀಸರ್ ಜಿ.ಆರ್.ತಾಂಡೇಲ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಸಾರ್ಜೆಂಟ್ ಸುನಾದ ಖಾರ್ವಿ ಸುಜನ ಶೆಟ್ಟಿ ರೋಹನ ನಾಯ್ಕ ಸಹಕರಿಸಿದರು.