ದಾಂಡೇಲಿ : ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರವೆಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ನಗರದ ಆದಿ ಜಾಂಬವoತ ಸಂಘ ಮತ್ತು ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ವತಿಯಿಂದ ತಹಶೀಲ್ದಾರ್ ಕಚೇರಿ ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯ್ತು.
ಮನವಿಯಲ್ಲಿ ಮಣಿಪುರದಲ್ಲಿ ನಡೆದ ಘಟನೆಯನ್ನು ಖಂಡಿಸಿ, ಇಡೀ ದೇಶದ ಹೆಣ್ಣು ಮಕ್ಕಳು ಹಾಗೂ ನಾಗರಿಕ ಸಮಾಜವೂ ತಲೆ ತಗ್ಗಿಸುವಂತಹ ಘಟನೆ ಇದಾಗಿದೆ. ಸಂತ್ರಸ್ತ ಮಹಿಳೆಯರಿಗೆ ಪರಿಹಾರ ಹಾಗೂ ಸೂಕ್ತ ರಕ್ಷಣೆ ನೀಡಬೇಕೆಂದು ಅಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾoತ ನಡಿಗೇರ, ಸಂಘಟನೆಯ ಪ್ರಮುಖರುಗಳಾದ ಶ್ರೀನಿತ್ಯಾ ಕಾಂಬಳೆ, ಸುರೇಶ ಕೇದಾರಿ, ಶಕೀಲಾಬಾನು, ಹುಸೇನಮೀಯಾ ಸವಣೂರ, ಸದಾಶೀವ ಕಾಂಬಳೆ, ಸುನೀಲ ಕಾಂಬಳೆ, ದತ್ತು ಮಾಳಗೆ, ರಾಜೇಶ ಕಾಂಬಳೆ, ಪರಶುರಾಮ ಸೂರನಾಯಕ, ಹೊನ್ನುರಪ್ಪಾ, ಜ್ಯೋತಿಬಾ ಕೇದಾರಿ ಮೊದಲಾದವರು ಉಪಸ್ಥಿತರಿದ್ದರು.