ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಾಧ್ಯ

ಸಿದ್ದಾಪುರ : ಆತ್ಮವಿಶ್ವಾಸ, ಶಿಸ್ತು, ಸತತ ಪರಿಶ್ರಮ, ದೃಢ ಸಂಕಲ್ಪದೊಂದಿಗೆ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು
ದಿವೇಕರ ವಾಣಿಜ್ಯ ಮಹಾವಿದ್ಯಾಲಯ, ಕಾರವಾರದ ನಿವೃತ್ತ ಪ್ರಾಧ್ಯಾಪಕ ಹಾಗೂ
ಅಂಕಣಕಾರ ಪ್ರೊ. ಸುರೇಂದ್ರ ದಫೇದಾರ ಹೇಳಿದರು.
ಅಲ್ಲದೆ ನಾವು ಹೇಗೆ ವೈಜ್ಞಾನಿಕ ಸಂಶೋಧನೆಗಳ ಫಲಾನುಭವಿಗಳು ಎಂಬುದನ್ನು ಸವಿವರವಾಗಿ ತಿಳಿಸಿ ವಿಧ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅವರು ತಾಲೂಕಿನ ನಾಣಿಕಟ್ಟಾದ
ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ
ಆಯೋಜಿಸಿದ್ದ 2023-24 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ತ್ಯಾಗಲಿಯ ಶಿಕ್ಷಣಾಭಿಮಾನಿಗಳು ಹಾಗೂ ಸಾಮಾಜಿಕ ಕಾಳಜಿಯುಳ್ಳ ವಿ. ಎಂ.ಹೆಗಡೆ. ಶಿಂಗುರವರು ವ್ಯಸನ ಮುಕ್ತ ಸಮಾಜ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಹೇಗೆ ಎಂದು ವಿವರಿಸಿದರು. ವ್ಯಸನಕ್ಕೆ ದಾಸರಾಗಿ ಅವನತಿ ಹೊಂದಿದ ಜನರ ಕುರಿತು ತಿಳಿಸಿ ಯುವ ವಿಧ್ಯಾರ್ಥಿಗಳು ಯಾವುದೇ ವ್ಯಸನದ ದಾಸರಾಗದೆ ಸ್ವಸ್ಥ ಸಮಾಜ ನಿರ್ಮಿಸುವ ಜವಾಬ್ದಾರಿ ಹೊರಬೇಕೆಂದರು.
ಪ್ರಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಗಳಾದ ಶ್ವೇತಾ, ಅಕ್ಷತಾ, ಜ್ಯೋತಿ, ಮಾನ್ಯ ಹಾಗೂ ಸಿಂಚನಾ ಪ್ರಾರ್ಥಿಸಿದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಎಂ.ಐ.ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು, ಭೌತಶಾಸ್ತ್ರ ಉಪನ್ಯಾಸಕ ಎಂ ಎಂ ಭಟ್ ಅತಿಥಿಗಳ ಪರಿಚಯ ಮಾಡಿದರು.
ರಾಜ್ಯಶಾಸ್ತ್ರಉಪನ್ಯಾಸಕ ತನುಜಾ ನಾಯ್ಕ ವಿಧ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧನೆ ಮಾಡಿದರು . ವಿದ್ಯಾರ್ಥಿ ಸಂಸತ್ತಿನ ಪ್ರಧಾನ ಕಾರ್ಯದರ್ಶಿ ಕೌಶಿಕ್‌ ಎಂ ಹೆಗಡೆ, ವಿಧ್ಯಾರ್ಥಿ ಪ್ರತಿನಿಧಿಗಳ ಪರವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸ.ಪ.ಪೂ.ಕಾಲೇಜು ನಾಣಿಕಟ್ಟಾದ ಪ್ರಾಚಾರ್ಯ ನರಹರಿ ಜೆ ಹೆಗಡೆ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಡೆದ ಕಿವಿಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಿಳಿಸಿದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀನಿವಾಸ ನಾಗರಕಟ್ಟೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು ಹಾಗೂ
ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಭಾಗ್ಯಶ್ರೀ ಆರ್ ನಾಯ್ಕ ಎಲ್ಲರಿಗೂ ವಂದಿಸಿದರು.