ಯಲ್ಲಾಪುರ:ಆನಗೋಡ ವಲಯ ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ

ಬಿಇಒ ಎನ್.ಆರ್.ಹೆಗಡೆ ಮಾತನಾಡಿ,ಶಿಕ್ಷಕರ ಭದ್ದತೆ ಸಮಯ ಪಾಲನೆ ಬೆಳೆಸಿಕೊಳ್ಳಬೇಕು.ತಾಲೂಕಿನಲ್ಲಿ ದೈಹಿಕ ಶಿಕ್ಷಕರ ಸಂಖ್ಯೆ ಕಡಿಮೆ ಇದೆ ಆದಾಗ್ಯೂ ಇಲಾಖೆಯ ಕ್ರೀಡಾಕೂಟ ವ್ಯವಸ್ಥಿತವಾಗಿ ಮಾಡಬೇಕು ಎಂದರು.
ಅತಿಹೆಚ್ಚು ಸಾರಿಗೆ ವೆಚ್ಚ ಮಕ್ಕಳಿಗೆ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸಿದ ಆನಗೋಡ ಕ್ಲಸ್ಟರ್ ನ ಎಲ್ಲ ಶಿಕ್ಷಕರನ್ನು ಸಿಆರ್ಪಿ ಸಂಜೀವಕುಮಾರ ಹೊಸ್ಕೇರಿ ಅವರನ್ನು ಅಭಿನಂದಿಸಿದರು.
ಅತಿಥಿ ಶಿಕ್ಷಕರ ನಿಯೋಜನೆ ನೆಡೆದ ಚರ್ಚೆಯಲ್ಲಿ ಎಲ್ಲ ಶಿಕ್ಷಕರ ಹಂಚಿಕೆ ಆಗಿದೆ.ಕೆಜಿ.ಎಸ್ ಶಾಲೆಯ ಮುಖ್ಯ ಶಿಕ್ಷಕಿ ರೇವತಿ ನಾಯಕ ಸ್ವಂತ ಖರ್ಚಿನಲ್ಲಿ ಅತಿಥಿ ಶಿಕ್ಷಕರನ್ನು ಶಾಲೆಗೆ ನಿಯೋಜಿಸಿಕೊಳ್ಳುವ ಬಗ್ಗೆ ರೇವತಿ ನಾಯ್ಕ ಅವರ ಕಾರ್ಯ ಅನುಕರಣೀಯ ಎಂದರು.
ಪ್ರಭಾರೆ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ,ಸಿಆರ್ಪಿ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿದರು. ಸಿಆರ್ಪಿ ಶ್ರೀನಿವಾಸ ದೇವಡಿಗ ವಂದಿಸಿದರು.