ಸಿದ್ದಾಪುರ : ಮಳೆಗಾಲ ಬಂತೆಂದರೆ ಹಳ್ಳಿಗಳಲ್ಲಿ ರೈತರು ಬಿಡುವುಇಲ್ಲದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ನಾವು ಕಾಣುತ್ತೇವೆ ಈ ಬಾರಿ ಮಳೆ ತಡವಾಗಿ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಅಬ್ಬರದಿಂದ ಆರಂಭಗೊಂಡಿವೆ . ನಿರಂತರವಾಗಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು ಮಳೆಯ ಜೊತೆಜೊತೆಯಲಿ ಗದ್ದೆ ನಾಟಿ ಕಾರ್ಯ ವು ಸಾಗುತ್ತಿದೆ
ಕೋಡ್ಕಣಿ ಹೋಬಳಿ ವ್ಯಾಪ್ತಿಯ ಸುಂಕತ್ತಿ, ಕುಂಬಾರಕುಳಿ, ದುಗಡಿಮನೆ ಮೊದಲಾದ ಕಡೆ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ.
ಕೆಲವು ಕಡೆಗಳಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯಾದ ಎತ್ತುಗಳಿಂದ ಉಳುಮೆ ಮಾಡುತ್ತಿದ್ದರೆ ಹಲವು ಕಡೆಗಳಲ್ಲಿ ಟಿಲ್ಲರ್ ಟ್ರ್ಯಾಕ್ಟರ್ ಗಳಲ್ಲಿ ಉಳುಮೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ ಯಾಂತ್ರಿಕರಣದ ಉಳುಮೆ ಮೇಲೆ ರೈತರು ಅವಲಂಬಿತರಾಗಿದ್ದಾರೆ
ಬತ್ತದ ಸಸಿ ಕೀಳುವುದು ಮತ್ತು ನಾಟಿ ಮಾಡುವ ಕಾಯಕದಲ್ಲಿ ವಯಸ್ಸಾದ ಮಹಿಳೆಯರು ಕಂಡು ಬಂದರೆ, ಗದ್ದೆ ಬದು (ಹಾಳಿ ) ಕೆತ್ತುವ ಕಾರ್ಯ, ಉಳುಮೆಯಲ್ಲಿ ವಯಸ್ಸಾದ ರೈತರೇ ಹೆಚ್ಚಿನವರಾಗಿದ್ದಾರೆ
ಯುವ ಜನತೆ ಕೃಷಿ ಕೆಲಸಗಳಲ್ಲಿ ಆಸಕ್ತಿ ವಹಿಸದೆ ಇರುವುದು ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರುವ ಲಕ್ಷಣಗಳು ಕಂಡುಬರುತ್ತಿದೆ
ಈ ಬಾರಿ ತಡವಾಗಿ ಮುಂಗಾರು ಆರಂಭವಾದ ಹಿನ್ನೆಲೆ ತಾರಾತುರಿಯಲ್ಲಿ ಬಿರುಸಿನಿಂದ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.