ಅಂಕೋಲಾ : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್ಓ (ಮತಗಟ್ಟೆ ಅಧಿಕಾರಿ) ಕೆಲಸದಿಂದ ಮುಕ್ತಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಂಕೋಲಾ ತಾಲೂಕಾ ಸಮಿತಿಯ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಶಾಲಾ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆಗಳಲ್ಲಿ ಆಯಾ ತರಗತಿಗಳಲ್ಲಿ ಪಠ್ಯವನ್ನು ಪೂರ್ಣಗೊಳಿಸಲು ಶಾಲಾ ಕೆಲಸದ ದಿನಗಳನ್ನು ಕನಿಷ್ಟ 244 ದಿನಗಳೆಂದು ನಿದಿಪಡಿಸಲಾಗಿದೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಜನಗಣತಿ, ಚುನಾವಣಾ ಕಾರ್ಯ, ಮಕ್ಕಳ ಗಣತಿ ಕಾರ್ಯಗಳಿಗೆ ನಿಯೋಜಿಸುವದರಿಂದ ವಿದ್ಯಾರ್ಥಿಗಳ ಬೋಧನಾ ಕಲಿಕಾ ಪ್ರಕ್ರಿಯೆಗೆ ಕೇವಲ 180 ದಿನಗಳು ಮಾತ್ರ ಸಿಗುತ್ತಿವೆ. ಇದರಿಂದ ಬೋಧನಾ ಕಾರ್ಯವು ಕುಂಠಿತವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಐದನೇ ಮತ್ತು ಎಂಟನೇ ವರ್ಗದ ಪರೀಕ್ಷೆಗಳು ರಾಜ್ಯಮಟ್ಟದಲ್ಲಿ ನಡೆಯುವುದರಿಂದ ಶಿಕ್ಷಕರು ಬೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ ಉತ್ತಮ ಫಲಿತಾಂಶ ತರುವ ದೃಷ್ಟಿಯಿಂದ ಸರಕಾರವು ಹಲವು ಆದೇಶಗಳ ಮೂಲಕ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಷೇಧಿಸಿದೆ. ಶಿಕ್ಷಕರನ್ನು ಬಿ ಎಲ್ ಓ ಕಾರ್ಯಕ್ಕೆ ನಿಯೋಜಿಸಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನಷ್ಟ ಉಂಟಾಗಿ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುವಂತಾಗಿದೆ. ಉಲ್ಲೇಖ 2 ಮತ್ತು 3 ಪ್ರಕಾರ ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಚನಾಯಾಲಯವು ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸಬಾರದೆಂದು ಆದೇಶ ನೀಡಿದೆ. ಹಾಗೂ ಉಲ್ಲೇಖ 5, 6 ಮತ್ತು 7ರ ಪ್ರಕಾರ ಸರ್ಕಾರದ ಸುತ್ತೋಲೆಗಳಲ್ಲಿ ಶಿಕ್ಷಕರನ್ನು ಭೋಧಕೇತರ ಕೆಲಸಕ್ಕೆ ನಿಯೋಜನೆ ಮಾಡಬಾರದೆಂದು ತಿಳಿಸಲಾಗಿದೆ ಶಿಕ್ಷಕರ ಹೊರತಾಗಿ ಇತರ ಬೇರೆ ಬೇರೆ ನೌಕರರನ್ನು ಬಳಸಿಕೊಳ್ಳಲು ಅವಕಾಶವಿದ್ದು ಮತಕಟ್ಟೆ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ಬಿ ಎಲ್ ಓ ಕೆಲಸದಿಂದ ಮುಕ್ತಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿ ಮನವಿಯಲ್ಲಿ ತಿಳಿಸಲಾಗಿದೆ ಶಿಕ್ಷಕರನ್ನು ಬಿಎಲ್ಓ ಆಗಿ ನಿಯೋಜಿಸುವುದರಿಂದ ಮಕ್ಕಳ ಹಾಜರಾತಿಯನ್ನು ಎಸ್‌ಟಿಎಸ್ ನಲ್ಲಿ ಇಂದೀಕರಿಸುವುದು, ಅಕ್ಷರ ದಾಸೋಹ ಯೋಜನೆ ಅನುಷ್ಠಾನ, ಮೊಟ್ಟೆ ವಿತರಣೆ, ಕ್ರೀಡಾಕೂಟ ಆಯೋಜನೆ, ಪ್ರತಿಭಾ ಕಾರಂಜಿ ಮುತ್ಯಾದಿ ಕೆಲಸಗಳನ್ನು ಶಿಕ್ಷಕರು ನಿಯೋಜಿಸಬೇಕಾಗಿರುವುದರಿಂದ ಬಿಎಲ್ಓ ಕಾರ್ಯದಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರಿಗೆ ಮಾನಸಿಕವಾಗಿ ಸಿದ್ದರಾಗಲು ತುಂಬಾ ತೊಂದರೆಯಾಗುತ್ತದೆ ಹೀಗಾಗಿ ಮಾನ್ಯ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಮತ್ತು ಸರ್ಕಾರದ ಸುತ್ತೋಲೆ ಹಾಗೂ ಇಲಾಖೆಯ ಆದೇಶ ಇವುಗಳನ್ನು ಪರಿಗಣಿಸಿ ಅಂಕೋಲಾ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬೋಧಕೇತರ ಬಿಎಲ್ಓ ಕಾರ್ಯಕ್ಕೆ ನಿಯೋಜಿಸಿದಿರುವುದನ್ನು ರದ್ದುಪಡಿಸಿ ಬೋಧನಾ ಕಾರ್ಯಕ್ಕೆ ಹೆಚ್ಚು ಹೊತ್ತು ಕೊಡಲು ಶಿಕ್ಷಕರಿಗೆ ಅವಕಾಶ ಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಉಪ ತಹಶೀಲ್ದಾರ ಗಿರೀಶ ಜಾಂಬಾವಳಿಕರ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಕಾರ್ಯದರ್ಶಿ ರಾಜು ನಾಯಕ, ಉಪಾಧ್ಯಕ್ಷರಾದ ಭಾರತಿ ನಾಯಕ, ಮಂಜುನಾಥ ವಿ ನಾಯಕ, ಸದಸ್ಯ ವಿನಾಯಕ ಪಿ ನಾಯಕ, ಶೋಭಾ ಎಸ್ ನಾಯಕ, ತುಕಾರಾಮ ಬಂಟ, ಸಿ ಡಿ ಗಾಂವಕರ, ಆನಂದು ವಿ ನಾಯ್ಕ, ರಮಾ ಗೌಡ, ಜಯಲಕ್ಷ್ಮೀ ನಾಯಕ, ನಾರಾಯಣ ಆರ್ ನಾಯಕ, ವೆಂಕಟರಮಣ ಕೆ ನಾಯಕ, ಸುರೇಶ ಪಿ ಆಗೇರ, ಶ್ರೀನಿವಾಸ ಟಿ ನಾಯಕ, ಕಸ್ತೂರಿ ಆಗೇರ, ಭಾಸ್ಕರ ಆಗೇರ, ನಾಗವೇಣಿ ನಾಯಕ, ವೇಲಾಯುಧ ನಾಯರ್, ಅಶೋಕ ಎಲ್ ಬಲೆಗಾರ, ಶಂಕರ ನಾಯ್ಕ ಇದ್ದರು.