ಮಣಿಪುರ ಘಟನೆ ಖಂಡಿಸಿ ಎನ್. ಎಸ್. ಯು. ಐ ನಿಂದ ರಾಷ್ಟ್ರಪತಿಗಳಿಗೆ ಮನವಿ

ಸಿದ್ದಾಪುರ : ಮಣಿಪುರದಲ್ಲಿ ನಡೆದ ಘಟನೆ ಖಂಡಿಸಿ ಎನ್. ಎಸ್. ಯು. ಐ ನಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು
ಎನ್. ಎಸ್. ಯು. ಐ ಜಿಲ್ಲಾಧ್ಯಕ್ಷ
ವಿಶ್ವ ಮಡಿವಾಳ ಮಾತನಾಡಿ
ಮಣಿಪುರದಲ್ಲಿ ನಡೆದಿರುವ ಘಟನೆ ಖಂಡನೀಯ ಅಂತಹ ಘಟನೆ ಮಣಿಪುರದಲ್ಲಿ ಅಲ್ಲ ಎಲ್ಲಿಯೂ ನಡೆಯಬಾರದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಕೋಮುಗಲಭೆಗಳನ್ನು ಹುಟ್ಟು ಹಾಕುವುದರ ಮೂಲಕ. ಅದರಿಂದ ಅವರಿಗೆ ಈ ಘಟನೆ ಕುರಿತು ಏನು ಅನಿಸುವುದಿಲ್ಲ. ಯಾವುದೇ ರೀತಿಯ ಘಟನೆ ನಡೆದರೂ ಕೂಡ ಅವರಿಗೆ ಏನೂ ಪರಿಣಾಮ ಬೀರುವುದಿಲ್ಲ ಎಂದ ಅವರು
ಬಿಜೆಪಿ ಪಕ್ಷದವರಿಗೆ ಇದರ ಅನುಭವ ಮೊನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಗಿದೆ. ಈ ರೀತಿ ಕೋಮು ಗಲಭೆಗಳನ್ನು ಹುಟ್ಟು ಹಾಕಿದರೆ ಒಂದು ಸಲ ಗೆಲ್ಲಬಹುದು ಆದರೆ ಎಲ್ಲಾ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ಅರಿವು ಅವರಿಗೆ ಈಗಾಗಲೇ ಆಗಿದೆ ಎಂದುಕೊಳ್ಳುತ್ತೇನೆ. ಬಿಜೆಪಿ ಪಕ್ಷದವರು ರಾಮ ರಾಜ್ಯದ ಕನಸು ಕಾಣಿಸುತ್ತಾರೆ ಸಮಾಜದಲ್ಲಿ ಹೆಣ್ಣಿಗೆ ಪವಿತ್ರ ಸ್ಥಾನ ಕೊಟ್ಟಿರುವುದಾಗಿ ಹೇಳುತ್ತಾರೆ ಆದರೆ ಮಣಿಪುರದಲ್ಲಿ ನಡೆದಿರುವ ದೌರ್ಜನರ ಬಗ್ಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಆದ್ದರಿಂದ ಕೇಂದ್ರ ಸರ್ಕಾರದವರು ಮಣಿಪುರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವನ್ನು ತಕ್ಷಣದಲ್ಲಿ ವಜಾ ಗೊಳಿಸಿ ಅಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಜಾರಿಗೆ ತಂದು ಮಣಿಪುರ ರಾಜ್ಯದ ಜನತೆಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಬೇಕೆಂದು ವಿನಂತಿಸುತ್ತೇನೆ ಎಂದರು ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ರಾಕೇಶ್ ನಾಯ್ಕ್, ಪ್ರಮುಖ ಪುರಂದರ ನಾಯ್ಕ್ ಉಪಸ್ಥಿತರಿದ್ದರು.