ದಾಂಡೇಲಿಯಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದ ಜಾಗೃತಿ ಜಾಥಾ

ದಾಂಡೇಲಿ : ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ನಗರ ಸಭೆಯ ಆಶ್ರಯದಡಿ ಏಕಬಳಕೆ ಪ್ಲಾಸ್ಟಿಕ್ ನಿಷೇದ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಇಂದು ಆಯೋಜಿಲಾಯ್ತು.

ನಗರ ಸಭೆಯ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ನಗರದ ದಂಡಕಾರಣ್ಯ ಇಕೋ ಪಾರ್ಕ್ ಮುಂಭಾಗದಲ್ಲಿ ಸಂಪನ್ನಗೊಂಡಿತು. ಆ ಬಳಿಕ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಪ್ಲಾಸ್ಟಿಕ್ ಸ್ವಚ್ಚತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯ್ತು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಮಾತನಾಡಿ ಸ್ವಚ್ಚತೆ ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮೊದಲು ನನ್ನಿಂದಲೆ ಆರಂಭವಾಗಬೇಕು. ನನ್ನಿಂದ ಆರಂಭವಾದ ಈ ಅಭಿಯಾನ ನಾವೆಲ್ಲರೂ ಕೈ ಜೋಡಿಸಿ, ಸುಂದರ ನಗರವನ್ನಾಗಿಸುವ ಮೂಲಕ ಸಂಪನ್ನಗೊಂಡಾಗ ಮಾತ್ರ ಈ ಜಾಗೃತಿ ಅಭಿಯಾನ ಸಾರ್ಥಕತೆಯನ್ನು ಪಡೆಯಲು ಸಾಧ್ಯ ಮತ್ತು ಸ್ವಚ್ಚ, ಸದೃಢ ಪರಿಸರ ನಿರ್ಮಾಣವಾಗಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಗರ ಸಭಾ ಸದಸ್ಯರುಗಳಾದ ಮೋಹನ ಹಲವಾಯಿ, ಆಸೀಪ್ ಮುಜಾವರ್, ರುಕ್ಮಿಣಿ ಬಾಗಾಡೆ, ಶಿಲ್ಪಾ ಖೋಡೆ, ನಗರ ಸಭೆಯ ಪರಿಸರ ಅಭಿಯಂತರರಾದ ಶುಭಂ, ಆರೋಗ್ಯ ನಿರೀಕ್ಷಕರಾದ ವಿಲಾಸ್ ದೇವಕರ್, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮೊದಲಾದವರು ಉಪಸ್ಥಿತರಿದ್ದರು.