ಹಳಿಯಾಳ ತಾಲ್ಲೂಕಿನ ಡೋಮಗೇರಾದಲ್ಲಿ ಕುಸಿದ ಮನೆ -ಹಾನಿ

ಹಳಿಯಾಳ : ತಾಲ್ಲೂಕಿನೆಲ್ಲೆಡೆ ಸುರಿದ ಬಾರಿ ಮಳೆಯಿಂದಾಗಿ ಡೋಮಗೇರಾದಲ್ಲಿ ಸ್ಥಳೀಯ ರೈತರೊಬ್ಬರ ಮನೆಯ ಗೋಡೆ ಕುಸಿದು ಹಾನಿಯಾದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಡೋಮಗೇರಾದ ನಿವಾಸಿ ಚೌದುಪ್ಪಾ ಬೊಬಲಿ ಎಂಬವರ ಮನೆಯೆ ತೀವ್ರ ಮಳೆಗೆ ಕುಸಿದಿದ್ದು ಹಾನಿಯಾಗಿದೆ. ಈ ಬಾರಿಯ ಮಳೆಗೆ ತಾಲ್ಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮನೆಗಳಿಗೆ ಹಾಗೂ ಕೃಷಿ ಬೆಳೆಗಳಿಗೆ ಹಾನಿಯಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.