ಸಿದ್ದಾಪುರ : ಕಾಂಗ್ರೆಸ್ ನ ಹಿರಿಯ ಮುಖಂಡ ನಾಮಧಾರಿ ಸಮಾಜದ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ತಾಲೂಕ ರಾಷ್ಟ್ರೀಯ ಈಡಿಗ ಮಹಾಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಿ ಒತ್ತಾಯ ಮಾಡಿದರು
ಅಧ್ಯಕ್ಷ ರಾಜೇಶ್ ನಾಯ್ಕ್ ಕತ್ತಿ ಕೋಲ್ ಸಿರ್ಸಿ ಮಾತನಾಡಿ ಇಂದಿನ ಈ ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ನಮ್ಮ ಹಿಂದುಳಿದ ವರ್ಗದ ಹಿರಿಯ ನಾಯಕ ಕಳೆದ 40 ವರ್ಷಗಳಿಂದ ಪಕ್ಷದ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಬಿ ಕೆ ಹರಿಪ್ರಸಾದ್ ರವರನ್ನು ಆಡಳಿತಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಅವರನ್ನು ಕಡೆಗಣಿಸುತ್ತಿದೆ ಇದು ಸರಿಯಲ್ಲ. ಪಕ್ಷಕ್ಕಾಗಿ ಇಷ್ಟೊಂದು ಸುದೀರ್ಘ ಕಾಲ ದುಡಿದ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡದೆ ಇದ್ದಲ್ಲಿ ಅದರ ಪರಿಣಾಮವನ್ನು ಆಡಳಿತರೂಢ ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲು ಹಾಗೂ ಭೀಮಣ್ಣ ನಾಯ್ಕ್ ರವರನ್ನು ಗೆಲ್ಲಿಸಲು ಸಿರಸಿ ಸಿದ್ದಾಪುರ ಕ್ಷೇತ್ರದ ನಮ್ಮ ಸಮುದಾಯದವರ ಕೊಡುಗೆ ಸಹ ಇದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದರು. ಬಿಕೆ ಹರಿಪ್ರಸಾದ್ ರವರು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ. ಬಿಜೆಪಿ ಪಕ್ಷದ ವಿರುದ್ಧ ಯಾರಾದರೂ ಅವರ ಆಡಳಿತ ಅವಧಿಯಲ್ಲಿ ಮಾತನಾಡಿದ್ದು ಇದ್ದರೆ ಅದು ನಮ್ಮ ಬಿಕೆ ಹರಿಪ್ರಸಾದ್ ಮಾತ್ರ ಅವರಿಗೆ ಈಗ ಅನ್ಯಾಯವಾಗಿದೆ. ಅದನ್ನು ನಾವು ಇಂದು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಅವರನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಿದೆ ಅವರನ್ನು ನಿರ್ಲಕ್ಷಿಸಿದಲ್ಲಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಸಮಾಜದ ವತಿಯಿಂದ ಕಾಂಗ್ರೆಸ್ಸಿಗೆ ತಕ್ಕ ಉತ್ತರವನ್ನು ಕೊಡುತ್ತೇವೆ ಎಂದರು ಈ ಸಂದರ್ಭದಲ್ಲಿ ಸಂಘಟನೆಯ ಪ್ರ ಕಾರ್ಯದರ್ಶಿ ಅಣ್ಣಪ್ಪ ಶಿರಳಗಿ, ಕಾರ್ಯದರ್ಶಿ ಬಾಬು ನಾಯ್ಕ್, ರವಿ ಕೊಠರಿ, ಪಾಂಡುರಂಗ ಹಳದೋಟ, ಅನಿಲ್ ಕೊಠರಿ, ಮಹಾತ್ಮ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.