ಶ್ರೀಮನ್ನೆಲಮಾವಿ‌ಲ್ಲಿ ಸಂಸ್ಕೃತಿ ಸಂಪದ‌ ಉದ್ಘಾಟನೆ, ಗಂಗಾವತರಣ

ಸಿದ್ದಾಪುರ: ಶ್ರೀಮನ್ನೆಲಮಾವು ಮಠದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸಂಸ್ಕೃತಿ ಸಂಪದ ಉದ್ಘಾಟನೆ, ಭಕ್ತಿ ಸಂಗೀತ, ಭಜನೆ, ಗಂಗಾವತರಣ‌ ಯಕ್ಷ ನೃತ್ಯ ರೂಪಕ ಜುಲೈ೨೮ರಂದು‌ ನಡೆಯಲಿದೆ.
ಶ್ರೀಮನ್ನೆಲಮಾವು ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶ್ರೀಮಾಧವಾನಂದ ಭಾರತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಧ್ಯಾಹ್ನ ೧೨:೩೦ಕ್ಕೆ
ಶ್ರೀ ಶಂಕರ‌ಕೃಪಾ ಸಭಾಭವನದಲ್ಲಿ
ಉದ್ಘಾಟಿಸಲಿದ್ದಾರೆ.
ಸೀಮೆಯ ಭಜನಾ ಮಂಡಳಿಗಳಿಂದ ಭಜನೆ, ಕಲಾವಿದರಿಂದ ಭಕ್ತಿ‌ಸಂಗೀತ ಹಾಗೂ ಸಂಜೆ ೫:೩೦ಕ್ಕೆ ಗಂಗಾವತರಣ ಯಕ್ಷ ನೃತ್ಯ ರೂಪಕ ‌ಪ್ರದರ್ಶನಗೊಳ್ಳಲಿದೆ.
ಪ್ರೋ.ಎಂ.ಎ.ಹೆಗಡೆ ವಿರಚಿತ
ವಿದ್ಯಾವಾಚಸ್ಪತಿ ಉಮಕಾಂತ ಭಟ್ಟ‌ ಕೆರೇಕೈ ನಿರ್ದೇಶನದ ಕು. ತುಳಸಿ ಹೆಗಡೆ ಏಕ ವ್ಯಕ್ತಿ ಮುಮ್ಮೇಳ ರೂಪಕ ಇದಾಗಿದೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಹಾಗೂ ಪ್ರಸಾದನದಲ್ಲಿ ಉಮೇಶ ಹೆಗಡೆ ಸಹಕಾರ ನೀಡಲಿದ್ದಾರೆ‌ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ