ಸಿದ್ದಾಪುರ : ಮಳೆಯಿಂದಾಗಿ ಹಾನಿಯಾದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ

ಸಿದ್ದಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಹಾನಿ ಸಂಭವಹಿಸಿದೆ ಹಾನಿಯಾದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ
ಇಳಿಮನೆ ಗ್ರಾಮ ಬುದಾಗಿತ್ತಿ ಮಜಿರೆ ಮಾದೇವಿ ತಿಮ್ಮ ನಾಯ್ಕ್ ಇವರ ಕಚ್ಚಾ ಮನೆ ಕುಸಿದು ಬಿದ್ದು ಭಾಗಶ ಹಾನಿಯಾಗುತ್ತದೆ.ಹಾನಿಯ ಅಂದಾಜು ಮೊತ್ತ 50,000ರೂ ಆಗಿದೆ ಎಂದು ಮಾಹಿತಿ ನೀಡಿದ್ದಾರೆ
ಸದ್ರಿ ಮನೆಯೂ ಶಿಥಿಲಾವಸ್ಥೆಯಲ್ಲಿದುದ್ದರಿಂದ ಮಳೆಗಾಲದಲ್ಲಿ ಬೀಳುವ ಸಂಭವ ಮುನ್ಸೂಚನೆ ಇದ್ದ ಕಾರಣ ಮನೆಯವರು ಕಳೆದ 2 ತಿಂಗಳಿಂದ ಪಕ್ಕದಲ್ಲಿದ ಮಗಳ ಮನೆಯಲ್ಲಿ ವಾಸ್ತ್ಯವವಿರುವುದರಿಂದ ಯಾವುದೇ ಪ್ರಾಣ ಹಾನಿ ಆಗಿಲ್ಲವೆಂದು ತಿಳಿಸಿದ್ದಾರೆ
ಕೆರೆಮನೆ ಗ್ರಾಮ ಕಲ್ಮನೆ ಮಜಿರೆ ಸುಶೀಲ ಗಣಪತಿ ಗೌಡ ರವರ ವಾಸ್ತವ್ಯದ ಕಚ್ಚಾ ಮನೆಯ ಮಣ್ಣಿನ ಗೋಡೆಯು ಬಾರೀ ಮಳೆಯಿಂದಾಗಿ ತೇವಾoಶಗೊಂಡ ಗೋಡೆ ಮಣ್ಣು ಬಿದ್ದಿರುತ್ತದೆ .ಅಂದಾಜು ಹಾನಿ 5000ರೂ ಹಾನಿಯಾಗಿದೆ .ಯಾವುದೇ ಪ್ರಾಣ‌ಹಾನಿಯಾಗಿರುವುದಿಲ್ಲ ಗೋಡೆ ಇನ್ನು ಬಿಳುವ ಹಂತದಲ್ಲಿರುವುದರಿಂದ, ಸದ್ರಿಯವರು ಸುರಕ್ಷತಾ ದೃಷ್ಟಿಯಿಂದ ಮನೆಯ ಹಿಂಬದಿಯಲ್ಲಿ ಉಳಿದಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ