ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ಪರಿಸರ ವಿಕೋಪದಲ್ಲಿ ಮನೆ ಕಳೆದುಕೊಂಡ ವರಿಗೆ ಡಿಸಿ ಅವರೊಂದಿಗೆ ಚರ್ಚಿಸಿ ಮಣ್ಣಿನ ಗೋಡೆಯಿರಲಿ ಯಾವುದೇ ರೀತಿಯ ಗೋಡೆಯಿರಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಪ್ರತಿ ವರ್ಷ ಬರುವ ಸಾಮಾನ್ಯ ಮಳೆಗೆ ಸಾರ್ವಜನಿಕರು ಸಾಕಷ್ಟು ಸಿದ್ಧತೆ ಕೂಡ ಮಾಡಿಕೊಳ್ಳಬೇಕು.. ಪಂಚಾಯತ್ ಗಳಿಂದ ನೀಡಿದ ಮನೆಗಳನ್ನು ಭದ್ರತೆಯಿಂದ ಕಟ್ಟಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರಾಗಿದೆ. ಸರ್ಕಾರ ಮನೆ ಕಟ್ಟಲು ನೀಡಿದ ಹಣದ ಜೊತೆಗೆ ನಾವು ಸ್ವಲ್ಪ ಹಣ ಹಾಕಿ ಕೈಜೋಡಿಸಿದರೆ ಭದ್ರವಾದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಅವರು ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಗೃಹಲಕ್ಷ್ಮಿ ನೋಂದಣಿ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಶಿರಸಿ ಸಿದ್ದಾಪುರ ಕ್ಷೇತ್ರ ಹಾಗೂ ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ನೋಂದಣಿ ಕಾರ್ಯಕ್ರಮ ಈಗಾಗಲೇ ಪ್ರಾರಂಭಿಸಲಾಗಿದೆ. ಈ ನೋಂದಣಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಹ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಪೂರ್ವದಲ್ಲಿ ಅನೇಕ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು ಅವುಗಳಲ್ಲಿ ಬಹಳ ಪ್ರಮುಖವಾದ ಐದು ಕಾರ್ಯಕ್ರಮಗಳು ಅದರಲ್ಲಿ ಕೆಲವು ಈಗಾಗಲೇ ಜಾರಿಯಾಗಿದ್ದು ಎಲ್ಲವೂ ಹಂತ ಹಂತವಾಗಿ ಜಾರಿಯಾಗಲಿದೆ ಎಂದರು.

ಮಳೆಯಿಂದ ರಸ್ತೆ ಹಾಗೂ ಚರಂಡಿಗಳು ಸಂಪೂರ್ಣವಾಗಿ ಹದಗೆಟ್ಟಿರುವ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದಾಗ ಅದನ್ನು ಶೀಘ್ರದಲ್ಲಿ ಸರಿಪಡಿಸುವ ಭರವಸೆ ನೀಡಿದರು
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ ಎನ್ ನಾಯ್ಕ ಬೇಡ್ಕಣಿ, ಬಾಲಕೃಷ್ಣ ನಾಯ್ಕ ಕೋಲಸಿರ್ಸಿ, ವೀರಭದ್ರ ನಾಯ್ಕ ಉಪಸ್ಥಿತರಿದ್ದರು.