ಹೆಗ್ಗರಣಿ ಪಂಚಾಯತ್ ಸುತ್ತಮುತ್ತಲಿನ ಭಾಗಗಳಲ್ಲಿ ಅಧಿಕ ಮಳೆ

ಸಿದ್ದಾಪುರ : ತಾಲೂಕು ಕೇಂದ್ರದಿಂದ ಅತೀ ದೂರದಲ್ಲಿರುವ ಪ್ರದೇಶವಾದ ಹೆಗ್ಗರಣಿ ಪಂಚಾಯತ್ ಸುತ್ತಮುತ್ತಲಿನ ಭಾಗಗಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು ಕೃಷಿ ಕೆಲಸಗಳಿಗೆ ಅಡಚಣೆ ಉಂಟಾಗಿದೆ ಜೊತೆಗೆ ಕೆಲ ದಿನಗಳಿಂದ ವಿದ್ಯುತ್, ನೆಟ್ವರ್ಕ್ ಸಂಪರ್ಕ ಇಲ್ಲದೆ ಜನತೆಗೆ ಹಲವಾರು ರೀತಿಯ ಸಮಸ್ಯೆಗಳು ತಲೆದೋರಿವೆ ಅಲ್ಲಲ್ಲಿ ಅಲ್ಪ ಹಾನಿ ವರದಿಯಾಗಿದೆ
ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗಾರ್ ಬೈಲ್ ನಲ್ಲಿ ಪ್ರಭಾಕರ್ ವೆಂಕಟರಮಣ ನಾಯ್ಕ್ ಎನ್ನುವವರ ಮನೆಯ ಹಿಂಭಾಗದ ಗುಡ್ಡ ಕುಸಿದು ಹಾನಿ ಯಾಗಿದೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಹಾನಿ ವರದಿ ನೀಡಿದ್ದಾರೆ