ಅಗಸ್ಟ 1ಕ್ಕೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಅಂಕೋಲಾ: ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ 76ನೇ ಜನ್ಮ ದಿನಾಚರಣೆ ಪ್ರಯುಕ್ತ ಕೆ.ಎಲ್.ಇ. ಸಮೂಹ ಸಂಸ್ಥೆಗಳು, ಲಯನ್ಸ ಕ್ಲಬ್ ಅಂಕೋಲಾ, ಕರಾವಳಿ. ಎಲ್.ಐ.ಸಿ. ಪ್ರತಿನಿಧಿಗಳ ಸಂಘ ಕುಮಟಾ ಅಂಕೋಲಾದ ಸಹಯೋಗದಲ್ಲಿ ಅಗಸ್ಟ 1 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಆಸಕ್ತರು ಹಾಜರಿದ್ದು ರಕ್ತದಾನದಲ್ಲಿ ಪಾಲ್ಗೊಳ್ಳಬಹುದು ಎಂದು ಕೆ.ಎಲ್.ಇ. ಸಮೂಹ ಸಂಸ್ಥೆಗಳ ಕಾರ್ಯಾದರ್ಶಿಗಳಾದ ಡಾ. ಡಿ.ಎಲ್.ಭಟ್ಕಳ, ಸಂಯೋಜಕರಾದ ಆರ್.ನಟರಾಜ ಹಾಗೂ ಸದಸ್ಯರಾದ ಡಾ.ಮಿನಲ್ ನಾರ್ವೇಕರ ಹಾಗೂ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ಪ್ರಾಚಾರ್ಯ ಡಾ.ವಿನಾಯಕ ಜಿ. ಹೆಗಡೆ (9480048963) ಅವರನ್ನು ಸಂಪರ್ಕಿಸಬಹುದು.