ಕೆ.ಕೆ ಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪೋಲ್ಸ್ ಹೇರಿಕೊಂಡು ಬರುತ್ತಿದ್ದ ಟ್ರಕ್ ಪಲ್ಟಿ

ಹಳಿಯಾಳ : ತಾಲ್ಲೂಕಿನ ಕೆ.ಕೆ.ಹಳ್ಳಿಯಲ್ಲಿ ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಪೋಲ್ಸ್ ಹೇರಿಕೊಂಡು ಬರುತ್ತಿದ್ದ ಟ್ರಕ್ಕೊಂದು ಪಲ್ಟಿಯಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ದಾಂಡೇಲಿಯ ಕಾಗದ ಕಾರ್ಖಾನೆಗೆ ಪೋಲ್ಸ್ ಹೇರಿಕೊಂಡು ಬರುತ್ತಿದ್ದ ಕೆಎ:10, ಎ:7655 ಸಂಖ್ಯೆಯ ಟ್ರಕ್ ಹಳಿಯಾಳಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಬರುವ ಕೆ.ಕೆ.ಹಳ್ಳಿಯಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ಟ್ರಕ್ಕಿನಲ್ಲಿದ್ದ ಪೋಲ್ಸ್ಗಳನ್ನು ಇನ್ನೊಂದು ಟ್ರಕ್ಕಿಗೆ ಸ್ಥಳಾಂತರಿಸಲಾಯ್ತು. ಘಟನಾ ಸ್ಥಳದಲ್ಲಿ ವಿದ್ಯುತ್ ಕಂಬಗಳೆರಡಿದ್ದು, ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಘಟನಾ ಸ್ಥಳಕ್ಕೆ ಹಳಿಯಾಳದ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.