ಸಿಂಗಾಪುರದಲ್ಲಿ ತಂತ್ರಗಾರಿಕೆ – ಕಾಂಗ್ರೆಸ್ ಸರ್ಕಾರಕ್ಕೆ ಆಪರೇಷನ್ ಭೀತಿ?

ಬೆಂಗಳೂರು: 135 ಸ್ಥಾನ ಗೆದ್ದಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಆಪರೇಷನ್‌ ಭೀತಿ ಕಾಡುತ್ತಿದ್ಯಾ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ.

ಈ ಪ್ರಶ್ನೆ ಏಳಲು ಕಾರಣ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆಡಿರುವ ಒಂದು ಮಾತು. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಕುಳಿತು ತಂತ್ರ ಮಾಡಿದರೆ ಗೊತ್ತಾಗುತ್ತದೆ ಎಂದು ಸಿಂಗಾಪುರದಲ್ಲಿ ಸರ್ಕಾರ ಬೀಳಿಸಲು ತಂತ್ರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಯಾವುದೇ ವ್ಯಕ್ತಿಯನ್ನು ಉದ್ದೇಶಿಸದೇ ಡಿಕೆಶಿ ಈ ಮಾತು ಹೇಳಿದ್ದು, ಸರ್ಕಾರ ಅಸ್ತಿರಗೊಳಿಸಲು ತೆರೆಮರೆಯಲ್ಲೆ ಪ್ರಯತ್ನ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ.

ಭಾನುವಾರ ನಡೆದ ಪಕ್ಷ ಸೇರ್ಪಡೆ ವೇದಿಕೆಯಲ್ಲೂ ಡಿಕೆ ಶಿವಕುಮಾರ್‌ ಈ ಮಾತನ್ನು ಹೇಳಿದ್ದರು. ಈಗ ಮತ್ತೊಮ್ಮೆ ಈ ಮಾತನ್ನು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.