ಬೆಂಗಳೂರು ಗ್ರಾಮಾಂತರ: ಕೆರೆಯಲ್ಲಿ ಈಜಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅಮಾನಿಕೆರೆಯಲ್ಲಿ ನಡೆದಿದೆ. ಕಾರ್ತಿಕ್(16), ಧನುಷ್(15), ಗುರುಪ್ರಸಾದ್(6) ನೀರುಪಾಲಾದ ಬಾಲಕರು. ಮೂವರು ನಿನ್ನೆ (ಜೂ.17) ಮಧ್ಯಾಹ್ನ ಶಾಲೆ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಾಲಕರು ನಿನ್ನೆ ಮನೆಗೆ ಬಾರದ ಹಿನ್ನೆಲೆ ಇಡೀ ರಾತ್ರಿ ಬಾಲಕರಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು.
ಇಂದು (ಜೂ.18) ಬೆಳಿಗ್ಗೆ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಕಾರ್ತಿಕ್ನ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.