ಅಭಿ-ಅವಿವಾ ಪಾರ್ಟಿ : ‘ಹೇ ಜಲೀಲಾ..’ ಹಾಡಿಗೆ ಡಾನ್ಸ್ ಮಾಡಿದ ಸುಮಲತಾ-ಯಶ್

ಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಮದುವೆ ನಂತರ ಅವರ ಆಪ್ತರಿಗಾಗಿ ಪಾರ್ಟಿಯೊಂದನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಹಲವು ತಾರೆಯರು ಆಗಮಿಸಿದ್ದರು. ಅಂಬರೀಶ್ ಅವರ ಜನಪ್ರಿಯ ಹಾಡಿಗೆ ನೃತ್ಯ ಕೂಡ ಮಾಡಿದರು.

ಅದರಲ್ಲೂ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಫೇಮಸ್ ಸಾಂಗ್ ‘ಹೇ ಜಲೀಲಾ..’ ಹಾಡಿಗೆ ಸುಮಲತಾ ಅಂಬರೀಶ್ ಜೊತೆ ಯಶ್ ಡಾನ್ಸ್ ಮಾಡಿದರು. ನಂತರ ಇವರಿಗೆ ಅಭಿಷೇಕ್ ಮತ್ತು ಅವಿವಾ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕಬ್ಲ್ ಅವಿವಾ ಹೆಸರಿನಲ್ಲಿ ಆಯೋಜನೆಯಾಗಿದ್ದ ಪಾರ್ಟಿಯಲ್ಲಿ ರಮ್ಯಾಕೃಷ್ಣ, ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರು ಕೂಡ ಹಾಜರಿದ್ದರು.