ಅಂಕೋಲಾ: ಯಶಸ್ವಿಯಾದ ಅಂಕೋಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ


ಅಂಕೋಲಾ : ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದ ವಾರ್ಷಿಕ ಮಹಾಸಭೆಯು ನಗರದ ಸರಕಾರಿ ಪ್ರೌಢಶಾಲೆ ಅಂಕೋಲಾದಲ್ಲಿ ಯಶಸ್ವಿಯಾಗಿ ಜರುಗಿತು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ, ಗುಣಾತ್ಮಕ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರದ ಅನುಮೋದಿತ ಅಧಿಕೃತ ಸಂಘವಾಗಿದ್ದು, ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ತಾಲೂಕು ಶಿಕ್ಷಕರ ಕುಂದು-ಕೊರತೆಗಳನ್ನು ನಿವಾರಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಸಭೆಯಲ್ಲಿ 2021-22ನೇ ಸಾಲಿನ ಮಹಾಸಭೆಯ ನಿರ್ಣಯಗಳನ್ನು ಓದಿ ದೃಢೀಕರಿಸಲಾಯಿತು. 2022-23ನೇ ಸಾಲಿನ ಆಡಿಟ್ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಮಂಡಿಸಿದರು ಸಭೆ ಅನುಮೋದಿಸಿತು. 2023-24ನೇ ಸಾಲಿನಲ್ಲಿ ಸಂಘ ಹಮ್ಮಿಕೊಳ್ಳಬಹುದಾದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಉಪಸ್ಥಿತರಿದ್ದ ಶಿಕ್ಷಕರು ಅನೇಕ ವಿದಾಯಕ ಸಲಹೆ-ಸೂಚನೆಗಳನ್ನು ನೀಡಿದರು. 2023-24ನೇ ಸಾಲಿನ ವಾರ್ಷಿಕ ಅಂದಾಜು ಪಟ್ಟಿಯ ಮಂಡನೆ ಸಭೆಯ ಅನುಮೋದನೆ ಪಡೆಯಲಾಯಿತು. ಸಂಘ ಹಮ್ಮಿಕೊಳ್ಳಬಹುದಾದ ಅನೇಕ ವಿದಾಯಕ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ಎನ್. ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ, ಉಪಾಧ್ಯಕ್ಷೆ ಭಾರತಿ ಬಿ. ನಾಯಕ, ಜಿಲ್ಲಾ ಸಹ ಕಾರ್ಯದರ್ಶಿ ಮಂಜುನಾಥ ಬಿ. ನಾಯಕ, ಜಿಲ್ಲಾ ಖಜಾಂಚಿ ಶೇಖರ ಗಾಂವಕರ, ತಾಲೂಕು ಖಜಾಂಚಿ ಲಕ್ಷ್ಮೀ ನಾಯಕ, ಸದಸ್ಯರಾದ ತುಕಾರಾಮ ಬಂಟ, ವೆಂಕಮ್ಮ ನಾಯಕ, ಶೋಭಾ ಎಸ್. ನಾಯಕ, ಸಂಜೀವ ಆರ್. ನಾಯಕ, ವಿನಾಯಕ ಪಿ. ನಾಯ್ಕ, ಆನಂದು ವಿ. ನಾಯಕ ಹಾಗೂ ತಾಲೂಕಿನ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಸ್ವಾಗತಿಸಿದರು. ವೇಲಾಯುಧ ನಾಯರ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಮಂಜುನಾಥ ವೆಂಕಟ್ರಮಣ ನಾಯಕ ವಂದಿಸಿದರು. ಶಿಕ್ಷಕ ರಾಜೇಶ ನಾಯಕ ಸೂರ್ವೆ ನಿರ್ವಹಿಸಿದರು.