ಸ್ವಾತಂತ್ರ್ಯೋತ್ಸವ ಆಚರಣೆಯ ಬಗ್ಗೆ ದಾಂಡೇಲಿಯಲ್ಲಿ ಪೂರ್ವಭಾವಿ ಸಭೆ

ದಾಂಡೇಲಿ : ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಯು ತಾಲ್ಲೂಕಾಡಳಿತ ಮತ್ತು ನಗರಾಡಳಿತದ ಆಶ್ರಯದಡಿ ನಗರ ಸಭೆಯ ಸಭಾಭವನದಲ್ಲಿ ಶನಿವಾರ ಜರುಗಿತು.

ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲು ನಿರ್ಧರಿಸಲಾಯ್ತು. ಎಂದಿನಂತೆ ಹಳೆ ನಗರ ಸಭಾ ಮೈದಾನದಲ್ಲಿ ಸ್ವಾತಂತ್ರೋತ್ಸವ ಆಚರಣೆಯನ್ನು ಮಾಡಲಿದ್ದು, ನಗರದ ಎಲ್ಲಾ ಶಾಲಾ/ಕಾಲೇಜಿನ ವಿದ್ಯಾರ್ಥಿಗಳು, ಶಾಲಾ/ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದದವರು, ಹಾಗೂ ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮತ್ತು ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಭಾಗವಹಿಸುವಂತೆ ಮಾಹಿತಿ ನೀಡಬೇಕೆಂದು ನಿರ್ಧರಿಸಲಾಯ್ತು.

ಸ್ವಾತಂತ್ರೋತ್ಸವದ ನಿಮಿತ್ತ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ಪೌರಾಯುಕ್ತರಾದ ಆರ್.ಎಸ್.ಪವಾರ್, ಸಿಪಿಐ ಬಿ.ಎಸ್.ಲೋಕಾಪುರ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮಜೀದ್ ಸನದಿ, ಬುದ್ಧಿವಂತಗೌಡ ಪಾಟೀಲ್, ಸಪೂರ ಯರಗಟ್ಟಿ, ಸುಧಾ ರಾಮಲಿಂಗ ಜಾಧವ್, ಪ್ರೀತಿ ನಾಯರ್, ಶಾಹಿದಾ ಪಠಾಣ್, ಸುಗಂಧಾ ಕಾಂಬಳೆ, ನಗರದ ವಿವಿಧ ಶಾಲಾ/ಕಾಲೇಜಿನ ಶಿಕ್ಷಕರು, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.