ನಾಗ್ಪುರದ ಉದ್ಯಮಿಯೊಬ್ಬರು ಆನ್ಲೈನ್ ಜೂಜಿನಲ್ಲಿ 58 ಕೋಟಿ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಮೊದಲು 5 ಕೋಟಿ ರೂ. ಬಂದಿತ್ತು, ಹೆಚ್ಚು ಹಣ ಗಳಿಸಬಹುದೆನ್ನುವ ಆಸೆಯಲ್ಲಿ ಜೂಜಾಡಿ 58 ಲಕ್ಷ ರೂ. ಕಳೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು 14 ಕೋಟಿ ರೂ. ನಗದು, 4 ಕೆಜಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಉದ್ಯಮಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದ್ದು, ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸುವ ಮುನ್ನವೇ ಪರಾರಿಯಾಗಿದ್ದಾರೆ. ದುಬೈಗೆ ತೆರಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಉದ್ಯಮಿ ಹಲವು ಉದ್ಯಮಿಗಳಿಗೆ ಆನ್ಲೈನ್ ಜೂಜಾಡುವಂತೆ ಪ್ರೇರೇಪಿಸುತ್ತಿದ್ದ ಬಳಿಕ ಕೋಟಿಗಟ್ಟಲೆ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.
ಹೆಚ್ಚು ಲಾಭ ಗಳಿಸಲು ಆನ್ಲೈನ್ನಲ್ಲಿ ಜೂಜಾಡುವಂತೆ ಉದ್ಯಮಿಯೊಬ್ಬರಿಗೆ ಜೈನ್ ಮನವರಿಕೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದ್ಯಮಿ ಖಾತೆಗೆ 8 ಲಕ್ಷ ಹಣ ಜಮಾ ಮಾಡಿ ಜೂಜು ಆರಂಭಿಸಿದ್ದರು. ಆರಂಭದಲ್ಲಿ 5 ಕೋಟಿ ರೂ ಗೆದ್ದಿದ್ದರು. ಬಳಿಕ 58 ಕೋಟಿ ರೂ ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದಾರೆ.
ಉದ್ಯಮಿ ನಷ್ಟದ ಬಗ್ಗೆ ಅನುಮಾನಗೊಂಡು ತನ್ನ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದನು, ಆದರೆ ಆರೋಪಿಯು ಹಣವನ್ನು ಹಿಂದಿರುಗಿಸಲು ನಿರಾಕರಿಸಿದನು ಎಂದು ಅಧಿಕಾರಿ ಹೇಳಿದರು. ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ವಂಚನೆ ಪ್ರಕರಣ ದಾಖಲಾಗಿದೆ. ಗೊಂಡಿಯಾದಲ್ಲಿರುವ ಜೈನ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಕಾರ್ಯಾಚರಣೆಯಲ್ಲಿ 14 ಕೋಟಿ ರೂಪಾಯಿ ನಗದು ಮತ್ತು ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ.
ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ಗೊಂಡಿಯಾದಲ್ಲಿರುವ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.