ದಾಂಡೇಲಿಯ ಮಾರುತಿ ನಗರದ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ಕೇಂದ್ರದಲ್ಲಿ‌ ನೂಕು‌ನುಗ್ಗಲು

ದಾಂಡೇಲಿ: ನಗರ ಸಭೆಯ ವ್ಯಾಪ್ತಿಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ 4 ಕೇಂದ್ರಗಳನ್ನು ತೆರೆಯಲಾಗಿದ್ದು, ಈಗಾಗಲೆ ನೊಂದಣಿ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗಿದೆ.

ದಾಂಡೇಲಿ ನಗರದ ಟೌನಶಿಪ್ ನಲ್ಲಿರುವ ಅಂಬೇಡ್ಕರ್ ಭವನ, ಮಾರುತಿನಗರದಲ್ಲಿರುವ ಸಮುದಾಯ ಭವನ, ಹಳೆದಾಂಡೇಲಿಯ ಕನ್ನಡ ಶಾಲೆ ಮತ್ತು ಸುಭಾಸನಗರದ ಪೊಲೀಸ್ ಠಾಣೆ ಎದುರಿಗಿರುವ ಅಂಗನವಾಡಿ ಕೇಂದ್ರದಲ್ಲಿ ನೊಂದಣಿ ಕಾರ್ಯಕ್ಕೆ ಚಾಲನೆಯನ್ನು‌ ನೀಡಲಾಗಿದೆ. ನಗರದ ಮಾರುತಿ ನಗರದಲ್ಲಿರುವ ಅಂಬೇಡ್ಕರ್ ಭವನದ ನೋಂದಣಿ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗಿ ಕೆಲ ಹೊತ್ತು ಗೊಂದಲ ಏರ್ಪಟ್ಟಿತು.