ಹಳಿಯಾಳ : ಕೆ. ಎಲ್. ಎಸ್ ಶಿಕ್ಷಣ ಸಂಸ್ಥೆಯ ವಿ. ಡಿ. ಐ. ಟಿ ಮಹಾವಿದ್ಯಾಲಯಕ್ಕೆ ಭಾರತ ಸರ್ಕಾರದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್ ) ಯು “A” ಶ್ರೇಣಿಯನ್ನು ನೀಡಿದೆ.
ಇದೇ ಜುಲೈ 7 ಮತ್ತು 8ರಂದು ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದ ತ್ರಿ ಸದಸ್ಯರ ನ್ಯಾಕ್ ತಂಡವು ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಒದಗಿಸಿರುವ ಸೌಲಭ್ಯಗಳು, ಶೈಕ್ಷಣಿಕ ಪ್ರಗತಿ, ಸಾಮಾಜಿಕ ಕೊಡುಗೆಗಳನ್ನು ಮೌಲ್ಯಮಾಪನ ಮಾಡಿ ಸವಿಸ್ತಾರವಾದ ವರದಿಯನ್ನು ಸಲ್ಲಿಸಿತ್ತು . ವರದಿಯ ಆಧಾರದ ಮೇಲೆ ನ್ಯಾಕ್ ಮಾನ್ಯತಾ ಮಂಡಳಿಯು ಮಹಾವಿದ್ಯಾಲಯಕ್ಕೆ “A” ಶ್ರೇಣಿಯನ್ನು ನೀಡಿದೆ.
ಕಳೆದ 5 ವರ್ಷ ಗಳಲ್ಲಿ 19 ಪೇಟೆಂಟ್, 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ರೂ 60 ಲಕ್ಷ ಗಳ ಸಂಶೋಧನಾ ಅನುದಾನ, 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸುವದು ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮಹಾವಿದ್ಯಾಲಯವು ಗಮನಾರ್ಹ ಸಾಧನೆಯನ್ನು ಮಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ನ್ಯಾಕ್ ಮಾನ್ಯತೆ ದೊರೆತಿರುವದಕ್ಕೆ ಕಾಲೇಜಿನ ಪ್ರಾಚಾರ್ಯರು, ವಿಭಾಗ ಮುಖ್ಯಸ್ಥರು, ಬೋಧಕ ವೃಂದ ಹಾಗೂ ಬೋಧಕೇತರ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.