ಸಿದ್ದಾಪುರದಲ್ಲಿ ಗದ್ದೆನಾಟಿ ಕಾರ್ಯ ಆರಂಭ

ಸಿದ್ದಾಪುರ : ಮಲೆನಾಡಿನ ಭಾಗಗಳಲ್ಲಿ ಬತ್ತದ ಬೆಳೆ ಬೆಳೆಯುವ ರೈತರನ್ನು ಹೆಚ್ಚಿನ ಪ್ರಮಾಣದಲ್ಲಿ ನಾವು ಕಾಣುತ್ತೇವೆ ಗದ್ದೆ ಉಳುಮೆ, ಕಟಾವು, ಸಂಸ್ಕರಣೆ ಮಾಡಲು ಯಂತ್ರೋಪಕರಣಗಳನ್ನು ಬಳಸುತ್ತಿರುವ ರೈತರು ಗದ್ದೆ ನಾಟಿ ಮಾಡಲು ನುರಿತ ಕೃಷಿಕ ಮಹಿಳೆಯರ ಮೇಲೆ ಅವಲಂಬಿತರಾಗಿದ್ದಾರೆ
ಸುರಿಯುವ ಮಳೆಯಲಿ ರೈತ ಮಹಿಳೆಯರು ಮಳೆ ರಕ್ಷಣೆಗೆ ಪ್ಲಾಸ್ಟಿಕ್, ಕಂಬಳಿ ಹೊದಿಕೆಯ ಧರಿಸಿ ಗದ್ದೆ ನಾಟಿ ಮಾಡುತ್ತಾರೆ ಈ ಸಂದರ್ಭದಲ್ಲಿ ಬೇಸರವಾಗದೆ ಇರಲಿ ಎಂದು ಜಾನಪದ ಹಾಡುಗಳನ್ನು ಹಾಡುತ್ತಾ ಗದ್ದನಾಟಿ ಮಾಡುವುದು ಜಾನಪದ ಸೊಬಗನ್ನ ಹೆಚ್ಚಿಸುವುದರ ಜೊತೆಗೆ ಕೇಳುಗರಿಗೂ ಇಂಪಾಗಿರುತ್ತದೆ ಯಾವುದೇ ರೀತಿಯ ಸಂಗೀತ ತರಬೇತಿಯಿಲ್ಲದೆ ರೂಡಿಯಿಂದ ಹಾಡಿಕೊಂಡ ಬಂದಂತಹ ಕಲೆ ಇದಾಗಿದೆ, ಕೆಲಸದಲ್ಲಿ ನಿರತರದವರಲ್ಲಿ ಮೂರು ನಾಲ್ಕು ಜನ ಹಾಡುಗಳನ್ನು ಹಾಡುತ್ತಾರೆ ಉಳಿದವರು ಹಾಡಿಗೆ ಧ್ವನಿ ಗೂಡಿಸುತ್ತಾರೆ ವಿಧ ವಿಧವಾದ ಸಂದರ್ಭಗಳ ಹಾಡುಗಳನ್ನು ಇವರು ಹಾಡುತ್ತಾರೆ
ಮದುವೆ ತಯಾರಿ, ಹೆಣ್ಣು ಒಪ್ಪಿಸುವುದು, ನಾಮಕರಣ, ಸೀಮಂತ, ಮುಂತಾದ ಸಂದರ್ಭದ ಸನ್ನಿವೇಶಗಳನ್ನ ಹಾಡಿನ ರೂಪಾoತರಿಸಿ ಹಾಡುವುದನ್ನ ಕೇಳಲು ಬಲು ಸೊಗಸಾಗಿರುತ್ತದೆ ಈ ರೀತಿಯ ಹಾಡುವವರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು ಅಪರೂಪಕ್ಕೆ ಅಲ್ಲಲ್ಲಿ ಇಂತಹ ಸನ್ನಿವೇಶಗಳನ್ನು ನಾವು ನೋಡಬಹುದು ಗ್ರಾಮೀಣ ಸೊಗಡಿನ ಜಾನಪದ ಹಾಡುಗಳನ್ನು ಉಳಿಸುವ ಬೆಳೆಸುವ ಇವರ ಕಾಯಕವು ಅಭಿನಂದನೆಗೆ ಅರ್ಹವಾಗಿದೆ
ಕ್ಯಾಮೆರಾ ಮೆನ್ ಉದಯ್ ಜೊತೆ ನುಡಿಸಿರಿ ನ್ಯೂಸ್ ಗಾಗಿ ದಿವಾಕರ್ ನಾಯ್ಕ್ ಸಿದ್ದಾಪುರ.