ದೊಡ್ಮನೆ ಪ್ರೌಢ ಶಾಲೆಯಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ.

ಸಿದ್ದಾಪುರ : ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾಗಣಪತಿ ವಿದ್ಯಾವರ್ದಿನಿ ಪ್ರೌಢ ಶಾಲೆ ದೊಡ್ಮನೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಕಳ್ಳ ಸಾಗಣೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯ ಬಲಿಪಶುಗಳು ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ನಡೆಯಿತು
ನ್ಯಾಯಧೀಶ ತಿಮ್ಮಯ್ಯ ಜಿ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡುತ್ತ ನಮ್ಮ ಸಂವಿಧಾನ ದಲ್ಲಿ ಮಕ್ಕಳ ಏಳಿಗೆಗಾಗಿ ಭವಿಷ್ಯವನ್ನು ಉಜ್ವಲ ಗೊಳಿಸುವ ಸಲುವಾಗಿ ಹಲವಾರು ಕಾನೂನು ಯೋಜನೆ ಜಾರಿಗೆ ತಂದಿದೆ ಅದರಲ್ಲಿ ಮುಖ್ಯವಾಗಿ 14 ವರ್ಷದ ವರೆಗೆ ಕಡ್ಡಾಯ ಶಿಕ್ಷಣ ನೀಡುವುದು ಬಹು ಮುಖ್ಯವಾಗಿದೆ,ಮಕ್ಕಳು ಒಳ್ಳೆಯ ಸಂಸ್ಕೃತಿ, ಸನ್ನಡತೆ ಬೆಳೆಸಿಕೊಂಡು ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಮಕ್ಕಳ ಹಕ್ಕು ಕಸಿದುಕೊಳ್ಳುವುದು ಅಪರಾಧ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಎಲ್ಲರ ಕರ್ತವ್ಯ ವಾಗಿದೆ ಇತೀಚೆಗೆ ಮಕ್ಕಳ ಕಳ್ಳ ಸಾಗಣೆ ಮಹಾಮಾರಿಯಾಗಿ ಪರಿಣಮಿಸಿದೆ ಅದನ್ನ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಲಾಗಿದೆ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದರು
ಎ ಪಿ ಪಿ ಚಂದ್ರಶೇಖರ ಎಚ್ ಎಸ್ ಮಾತನಾಡಿ ಕಾನೂನು ಸೇವಾ ಪ್ರಧಿಕಾರದ ಗುರಿ ಉದ್ದೇಶ ಮಹತ್ವ ಕುರಿತು ತಿಳಿಸಿದರು
ವಕೀಲ ಆರ್ ಪಿ ಭಟ್ ವಿಷಯದ ಕುರಿತು ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿದಿನಗಳು, ಶಾಲಾ ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು