ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಭೀಮಣ್ಣ

ಸಿದ್ದಾಪುರ : ಜಿಲ್ಲೆಯ ಜನತೆ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಹೊರ ಹಾಕಿದ್ದು ಸಮರ್ಥವಾಗಿ ವಾದ ಮಂಡಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದೇ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಪ್ರಥಮ ಅಧಿವೇಶನದಲ್ಲಿ ಕ್ಷೇತ್ರದ ಜನತೆಯ ಸಮಸ್ಯೆಯನ್ನು ಸದನದ ಮುಂದಿಟ್ಟು ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿರುವ ಅರಣ್ಯ ಅತಿಕ್ರಮಣ ದಾರರಿಗೆ ಪಟ್ಟಾ ನೀಡಬೇಕು. ದೇವರಾಜ ಅರಸು ಅವರು ಜಾರಿಗೊಳಿಸಿದ ಉಳುವನೆ ಒಡೆಯ ಯೋಜನೆಯಲ್ಲಿ ಹಲವು ರೈತತಿಗೆ ಅನುಕೂಲವಾಗಿದೆ. ಆದರೇ ಇನ್ನುಳಿದ ರೈತರಿಗೂ ಇದರ ಪ್ರತಿಫಲ ದೊರೆಯಬೇಕು. ಅಲ್ಲದೇ ಉತ್ತರ ಕನ್ನಡ ಜಿಲ್ಲೆ ಹಲವು ವೈಷಿಷ್ಠö್ಯಗಳನ್ನು ಹೊಂದಿದೆ. ಒಂದೆಡೆ ಕರಾವಳಿ, ಮತ್ತೊಂದೆಡೆ ಮಲೆನಾಡು ಹಾಗೂ ಕೆಲವು ಪ್ರದೇಶ ಬಯಲು ಸೀಮೆಯನ್ನು ಹೊಂದಿದ ಪ್ರದೇಶ. ಪ್ರಸಕ್ತ ವರ್ಷ ಘಟ್ಟದ ಮೇಲ್ಬಾಗದಲ್ಲಿ ಮಳೆ ವಿಪರೀತ ಕಡಿಮೆಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಆ ನಿಟ್ಟಿನಲ್ಲಿ ಸರಕಾರ ನಮ್ಮ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಮಲೆನಾಡಿನ ಪ್ರದೇಶದಲ್ಲಿ ಹೆಚ್ಚಾಗಿ ಇರುವವರು ಅಡಿಕೆ ಬೆಳೆಗಾರರು. ಈ ವರ್ಷ ಕಡಿಮೆ ಮಳೆಯಿಂದ ಅಡಿಕೆ ಬೆಳೆಗೆ ತೊಂದರೇ ಉಂಟಾಗಿದೆ. ಎಲೆ ಚುಕ್ಕೆ ರೋಗ, ಅಡಿಕೆ ಮಿಳ್ಳೆ ಉದುರುವುದು ಇದರಿಂದ ಅಡಿಕೆ ಬೆಳೆಗಾರ ತನ್ನ ಫಸಲನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದು ಇಂತಹ ಅಡಿಕೆ ಬೆಳೆಗಾರರಿಗೆ ರಕ್ಷಣೆ ನೀಡಬೇಕು ಎಂದು ತನ್ನ ವಾದವನ್ನು ಸದನದ ಮುಂದೆ ಪ್ರಸ್ತುತ ಪಡಿಸಿದರು.

ಸದನದಲ್ಲಿ ಜಿಲ್ಲೆಯ ಸಮಸ್ಯೆಯನ್ನು ಸಮರ್ಥವಾಗಿ ಮಂಡಿಸಿದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಶಿರಸಿಯ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ.
ಅಭಿಮಾನಿಗಳು ವಾಟ್ಸಪ್, ಫೇಸ್ಬುಕ್ ಸ್ಟೇಟಸ್ ಹಾಕಿ ಸಂಭ್ರಮಿಸುತ್ತಿದ್ದಾರೆ