ಜೋಯಿಡಾ :- ತಾಲೂಕಿನ ಗುಂದದಲ್ಲಿ ಭಾರಿ ಗಾತ್ರದ ಮರವೊಂದು ಧರೆಗುರುಳಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದಲ್ಲದೇ ಸುಮಾರು ಮೂರು ಗಂಟೆಗಳವರೆಗೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಸೋಮವಾರ ನಡೆದಿದೆ.
ಇಂದು ಸುರಿದ ಗಾಳಿ ಮಳೆಗೆ ಈ ಅನಾಹುತ ಸಂಭವಿಸಿದ್ದು, ಮರ ಬಿದ್ದ ತಕ್ಷಣವೇ ಸ್ಥಳೀಯರಾದ ಆನಂದ ಫರ್ನಾಂಡೀಸ್ ಮತ್ತು ಅರಣ್ಯ ಇಲಾಕೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೂಡಲೇ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹರಿದು ಕೆಲ ಕಾಲ ವಿದ್ಯುತ್ ಅಡಚಣೆ ಉಂಟಾಯಿತು, ಕೂಡಲೇ ಹೆಸ್ಕಾಂ ಸಿಬ್ಬಂದಿಗಳು ಕಾರ್ಯಪ್ರವೃತರಾಗಿ ವಿದ್ಯುತ್ ಲೈನ್ ಸರಿಪಡಿಸಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿದರು. ಸ್ಥಳೀಯರಾದ ಆನಂದಪೆರ್ನಾಂಡಿಸ್ ಹಾಗೂ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಇಲಾಖೆಯ ಸಕಾಲಿಕ ಸ್ಪಂದನೆಗೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.