ಭೀಮನ ಅಮಾವಾಸ್ಯೆ.. ಉತ್ತರ ಕನ್ನಡದಲ್ಲಿ ಅಳಿಯನ ಅಮಾವಾಸ್ಯೆ ಎಂದೇ ಪ್ರಸಿದ್ಧವಾಗಿದೆ. ಈ ಹಬ್ಬದ ನಿಮಿತ್ತ ಗುಣವಂತೆಯ ಶಂಭುಲಿಂಗೇಶ್ವರನ ದೇವಾಲಯದಲ್ಲಿ ಸಾವಿರಾರು ಭಕ್ತರು ಪೂಜೆ ಪುನಸ್ಕಾರ ಮಾಡಿದ್ರು…
ಆಷಾಢ ಮಾಸದ ಅಮಾವಾಸ್ಯೆಯನ್ನು ದಕ್ಷಿಣ ಭಾರತದಲ್ಲಿ ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತೆ. ಭೀಮನ ಅಮಾವಾಸ್ಯೆ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆಯನ್ನು ಮಾಡಿದ್ರೆ, ಅವಿವಾಹಿತ ಮಹಿಳೆಯರು ತಮ್ಮ ತಂದೆ, ಸಹೋದರರ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಈ ಪೂಜೆಯನ್ನು ಮಾಡ್ತಾರೆ…
ಮನೋನಿಯಾಮಕ ರುದ್ರ ದೇವನ ಇನ್ನೊಂದು ಹೆಸರು ಭೀಮ.. ಹೀಗಾಗಿ ಇದನ್ನು ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಅದ್ರಲ್ಲೂ ಮಹಿಳೆಯರು ತಮ್ಮ ಸಂಸಾರದ ಸುಖ , ಶಾಂತಿಃ , ನೆಮ್ಮದಿಗಾಗಿ ಆರಾಧನೆ ಮಾಡುವ ಹಬ್ಬವಾಗಿದೆ.
ಇನ್ನು ಉತ್ತರ ಕನ್ನಡದಲ್ಲಿ ಭೀಮನ ಅಮವಾಸ್ಯೆ, ಅಳಿಯನ ಅಮಾವಾಸ್ಯೆ ಎಂದೇ ಪ್ರಸಿದ್ಧವಾಗಿದೆ. ಜಿಲ್ಲೆಯಲ್ಲಿರುವ ಶಿವನ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ವು. ಅದ್ರಲ್ಲೂ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿರುವ ಪಂಚಕ್ಷೇತ್ರದಲ್ಲಿ ಒಂದಾದ ಶಂಭುಲಿಂಗೇಶ್ವರನ ದೇವಸ್ಥಾನ ಸಾವಿರಾರು ಭಕ್ತರಿಂದ ತುಂಬಿ ಹೋಗಿತ್ತು…
ನವ ದಂಪತಿಗಳು ಮುಂಜಾನೆ ಶುಚೀರ್ಬೂತರಾಗಿ ಬಂದು, ಶಂಬುಲಿಂಗೇಶ್ವರನ ದರ್ಶನ ಪಡೆದ್ರು. ತಮ್ಮ ದಾಂಪತ್ಯ ಜೀವನ ಸುಖಃಖರವಾಗಿರಲಿ ಎಂದು ಪ್ರಾರ್ಥಿಸಿದ್ರು. ಸಾವಿರಾರು ಭಕ್ತರಿಂದ ಶಂಭುಲಿಂಗೇಶ್ವರನ ದೇವಸ್ಥಾನ ತುಂಬಿ ತುಳುಕುತ್ತಿತ್ತು
ಭೀಮನ ಅಮವಾಸ್ಯೆ ನಿಮಿತ್ತ ಮುಂಜಾನೆಯೇ ಶಂಭುಲಿಂಗೇಶ್ವರದ ದೇಗುಲಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಇನ್ನು ದೇವಸ್ಥಾನದಲ್ಲೂ ಮಹಾದೇವನಿಗೆ ವಿಶೇಷ ಪೂಜೆ ನೆರವೇರಿಸಲಾಯ್ತು..
ಭೀಮನ ಅಮವಾಸ್ಯೆಯಂದು ಶಿವ ಪಾರ್ವತೀಯರು ಮದುವೆ ಆಗಿದ್ದಾರೆ ಎಂಬ ನಂಬಿಕೆಯೂ ಇದೆ. ಈ ಕಾರಣಕ್ಕಾಗಿಯೇ ನವದಂಪತಿಗಳು ಶಿವನ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ..