ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಗಣನೀಯ ಸ್ಕ್ವಾಡ್-ನಿರ್ಮಾಣದ ಜವಾಬ್ದಾರಿ ಇದೆ. ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ. ಈಗಾಗಲೆ ತಂಡದಲ್ಲಿ ಐದು ಬಲಗೈ ಆಟಗಾರರನ್ನು ಹೊಂದಿದ್ದು, ಮುಖ್ಯವಾಗಿ ಎಡಗೈ ಬ್ಯಾಟರ್ನ ಅವಶ್ಯಕತೆ ಹೆಚ್ಚಿದೆ.
ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್ಸಿಬಿ ತಂಡ ಭಾರತೀಯ ಆಟಗಾರರನ್ನು ಕೈಬಿಟ್ಟು ಕೆಲವು ವಿದೇಶಿ ಬಿಗ್ ಹಿಟ್ಟರ್ಗಳನ್ನು ಖರೀದಿಸಿದೆ. ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡು, ಉತ್ತಮ ತಂಡ ಕಟ್ಟುವ ನಿರೀಕ್ಷೆಯಲ್ಲಿ ಮೊದಲ ದಿನ ಹರಾಜಿನಲ್ಲಿ ಭಾಗವಹಿಸಿದ ತಂಡ ಆರಂಭದಲ್ಲಿ ಹಲವರಿಗೆ ಬಿಡ್ ಮಾಡಿದ್ರೂ, ಅವರನ್ನ ಖರೀದಿಸುವಲ್ಲಿ ವಿಫಲವಾಯ್ತು.
ಬೇರೆ ತಂಡಗಳಿಗೆ ಹೋಲಿಸಿದರೆ ಹೆಚ್ಚು ಪರ್ಸ್ ಹೊಂದಿದ್ದ ಬೆಂಗಳೂರು ತಂಡ ಬಿಡ್ಡಿಂಗ್ನಲ್ಲಿ ಭಾರೀ ಪೈಪೋಟಿ ನೀಡಲಿದೆ ಎಂದೇ ಊಹಿಸಿದ್ದರು. ಉಳಿದ ಪ್ರಮುಖ ಆಟಗಾರರಿಗೆ ಬದಲಾಗಿ ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಕರೆತರಲು 20 ಕೋಟಿಗೂ ಹೆಚ್ಚು ಬಿಡ್ ಮಾಡಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು, ಆದರೆ, ನಂತರ ಹಿಂದೆ ಸರಿಯಿತು.
ಸುಮಾರು 23 ಆಟಗಾರರಿಗಾಗಿ ಬಿಡ್ಡಿಂಗ್ ಕದನ ಪ್ರವೇಶಿಸಿದ ಬೆಂಗಳೂರು ತಂಡ ತಮ್ಮ ಮೊದಲ ಏಳು ಬಿಡ್‌ಗಳ ಅನ್ವೇಷಣೆಯಲ್ಲಿ ವಿಫಲವಾದ ನಂತರ, ಅವರು ತಮ್ಮ ಮೊದಲ ಆಟಗಾರ ಲಿವಿಂಗ್‌ಸ್ಟೋನ್ ಅನ್ನು ಖರೀದಿಸುವಲ್ಲಿ ಸಫಲವಾಯ್ತು. ಕುತೂಹಲಕಾರಿಯಾಗಿ, ಅವರು ಮೂರು ದೊಡ್ಡ ಭಾರತೀಯ ಆಟಗಾರರಾದ ರಾಹುಲ್, ಪಂತ್ ಅಥವಾ ಶ್ರೇಯಸ್ ಅಯ್ಯರ್ ಅವರಿಗಾಗಿ ಹೆಚ್ಚು ಪ್ರಯತ್ನ ಮಾಡಲಿಲ್ಲ.
ಇನ್ನು ವಿಕೆಟ್ ಕೀಪರ್ ಸ್ಲಾಟ್ನಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ರನ್ನ 11.50 ಕೋಟಿಗೆ ಖರೀದಿಸಿದೆ. ಅಲ್ಲದೆ ಭಾರತದ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ11 ಕೋಟಿಗೆ ಆರ್ಸಿಬಿ ಸೇರಿಕೊಂಡರು.ಆರ್ಸಿಬಿ ಮಾಜಿ ಆಟಗಾರ ಮಿಚೆಲ್ ಸ್ಟಾರ್ಕ್ ಅನ್ನು ಪಡೆಯಲು ಪಯತ್ನ ಮಾಡಿತು, ಆದ್ರೆ ಕೊನೆಯಲ್ಲಿ ದೆಹಲಿ ತಂಡದ ಎದುರು ಬಿಡ್ನಲ್ಲಿ ಸೋತ್ರು. ಇತ್ತ ಸ್ಟಾರ್ಕ್ ಅವರ ಸಹ ಆಟಗಾರ ಜೋಶ್ ಹೇಜಲ್ವುಡ್ ಅವರನ್ನು ಪಡೆಯುವಲ್ಲಿ ಆರ್ಸಿಬಿ ಯಶಸ್ವಿಯಾಯ್ತು. ಇದಲ್ಲದೆ ಜಮ್ಮು-ಕಾಶ್ಮೀರದ ವೇಗಿ ರಾಸಿಖ್ ದಾರ್ ಅವರನ್ನು 6 ಕೋಟಿಗೆ ಪಡೆದುಕೊಂಡಿದೆ. ಕೊನೆಯಲ್ಲಿ ಸ್ಪಿನ್ನರ್ ಸುಯಾಶ್ ಶರ್ಮಾ ಆರ್ಸಿಬಿ ಪಾಲಾಗಿದ್ದಾರೆ.
ಇನ್ನು ಸಾಕಷ್ಟು ಕುತೂಹಲಕಾರಿಯಾಗಿ RCB ತಂಡ ಮೊಹಮ್ಮದ್ ಸಿರಾಜ್ ಅಥವಾ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡಕ್ಕೆ ಮರಳಿ ಕರೆತರುವ ಪಯತ್ನ ಮಾಡಲಿಲ್ಲ. ಗಣನೀಯವಾಗಿ ಕಡಿಮೆ ಬೆಲೆಗೆ ತೆಗೆದುಕೊಂಡರೂ ಸಹ ಈ ಇಬ್ಬರನ್ನು ಉಳಿಸಿಕೊಳ್ಳಲು RTM ಬಳಸಲು ಪ್ರಯತ್ನಿಸದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
RCB ಏನು ಮಾಡಬೇಕು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಗಣನೀಯ ಸ್ಕ್ವಾಡ್-ನಿರ್ಮಾಣದ ಜವಾಬ್ದಾರಿ ಇದೆ. ಐಪಿಎಲ್ ಹರಾಜಿನ 2ನೇ ದಿನದಂದು ಅತ್ಯಧಿಕ ಪರ್ಸ್ ಅನ್ನು ಹೊಂದಿರುವ ತಂಡವಾಗಿದ್ದು, ಹರಾಜಿಗೆ ಬರುವ ಪ್ರಮುಖ ಆಟಗಾರರನ್ನು ಪಡೆಯುವ ಗುರಿ ಹೊಂದಿದೆ.
ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ. ಈಗಾಗಲೆ ತಂಡದಲ್ಲಿ ಐದು ಬಲಗೈ ಆಟಗಾರರನ್ನು ಹೊಂದಿದ್ದು, ಮುಖ್ಯವಾಗಿ ಎಡಗೈ ಬ್ಯಾಟರ್ನ ಅವಶ್ಯಕತೆ ಹೆಚ್ಚಿದೆ. ಈಗಾಗಲೆ ಲಿವಿಂಗ್‌ಸ್ಟೋನ್ ಮತ್ತು ಸಾಲ್ಟ್ ಅವರಿಗೆ ಬಿಡ್ ಮಾಡಿರುವ ಆರ್ಸಿಬಿ ಅವರಿಗೆ ಬ್ಯಾಕಪ್ ಆಗಿ ವಿದೇಶಿ ಆಟಗಾರರನ್ನು ಕರೆತಬೇಕಿದೆ.
ಇವೆಲ್ಲದರ ಜೊತೆ ಕನಿಷ್ಠ ಒಬ್ಬ ಪ್ರಮುಖ ಭಾರತೀಯ ಬ್ಯಾಟರ್ನ ಅವಶ್ಯಕತೆ ತಂಡಕ್ಕಿದೆ, ಇನ್ನು ಬೌಲಿಂಗ್ ವಿಭಾಗವನ್ನು ಉತ್ತಮಗೊಳಿಸಲು ಪ್ರಮುಖ ಸ್ಪಿನ್ನರ್ ಮತ್ತು ವೇಗಿಯ ಅವಶ್ಯಕತೆ ಇದೆ ಮತ್ತು ಉಳಿದ ಸ್ಥಾನಗಳನ್ನು ತುಂಬುವುದರ ಜೊತೆಗೆ ಅವರಗಿ ಬ್ಯಾಕಪ್ ಆಗಿ ಸಮರ್ಥ ಆಟಗಾರರನ್ನು ತಂಡಕ್ಕೆ ಕರೆತರುವ ಜವಾಬ್ದಾರಿ ಆರ್ಸಿಬಿ ಮೇಲಿದೆ.