ಕುಮಟಾ: ತಾಲೂಕಿನಲ್ಲಿ ಖಾಲಿ ಬಿದ್ದಿರುವ ಶಿಳ್ಳೆ ಗ್ರಾಮದ ಅರಣ್ಯ ಇಲಾಖೆ ಜಾಗವನ್ನು ಕಂದಾಯ ಇಲಾಖೆಗೆ ವರ್ಗಾಹಿಸಿ, ಆ ಜಾಗವನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನೀಡುವಂತೆ ಒತ್ತಾಯಿಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ನೇತೃತ್ವದಲ್ಲಿ ಸಾರ್ವಜನಿಕರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದ ನಾಗರಿಕರು, ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶ ಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ಶಿರಸಿ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಅಂತ್ರವಳ್ಳಿ ಗ್ರಾಮದ ಶಿಳ್ಳೆ ಸರ್ವೆ ನಂಬರ್ 256, 286, 352ರಲ್ಲಿ ಸಾವಿರಾರು ಎಕರೆ ಅರಣ್ಯ ಇಲಾಖೆ ಜಾಗವಿದ್ದು, ಈ ಪ್ರದೇಶದಲ್ಲಿ ಗಿಡಮರಗಳಿಲ್ಲದೆ ಖಾಲಿ ಬಿದ್ದಿದೆ. ಈ ಜಾಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಾಗಿದೆ ಶಿಳ್ಳೆಯಲ್ಲಿರುವ ಅರಣ್ಯ ಇಲಾಖೆಯ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗನೀಡಬಹುದು. ಇನ್ನು ಕುಮಟಾದಲ್ಲಿ ಸೂಕ್ತ ಜಾಗ ಇರುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೂ ತರಬೇಕು. ಈ ಮೂಲಕ ಜಿಲ್ಲೆಯ ಜನರ ನ್ಯಾಯಯುತ ಕೂಗಿಗೆ ಬೆಲೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಳಕೋಡ ಗ್ರಾಪಂ ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯರಾದ ವಿನಾಯಕ ನಾಯ್ಕ, ದೇವು ಗೌಡ, ರಾಜೀವ ಭಟ್ಟ ಇತರರು ಇದ್ದರು.