ಗೋಕರ್ಣ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಪತ್ನಿ ಕಮಲಾ ನಿರಾಣಿ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಆತ್ಮಲಿಂಗ ದರ್ಶನ ಪಡೆದರು.
ನಿರಾಣಿಯವರ ಪುತ್ರ ಮತ್ತಿತರ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಮಹಾಬಲ ಉಪಾಧ್ಯಾ, ವೇ. ಪರಮೇಶ್ವರ ಮಾರ್ಕಾಂಡೆ ಪೂಜಾ ಕೈಂಕರ್ಯ ನೆರವೇರಿಸಿ ಮಂದಿರದ ವತಿಯಿಂದ ಗೌರವಿಸಿದರು.