ಹೊನ್ನಾವರ: ತಾಲೂಕಿನಲ್ಲಿ ಕೆಲದಿನದ ಹಿಂದೆ ಸುರಿದ ಮಳೆಯಿಂದ ನೆರೆ ಬಂದು ನದಿ ತೀರದ ಜನರು ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿ ಮನೆ ಸೇರಿ, ನೆರೆ ಪರಿಹಾರಕ್ಕೆ ಅರ್ಜಿಯನ್ನು ಹಾಕಿದ್ದರು. ಈಗ ನೆರೆ ಪರಿಹಾರ ಕೊಡುವಲ್ಲಿ ತಾರತಮ್ಯ ನಡೆದಿದೆ ಎಂದು ಹಡಿನಬಾಳ ಗ್ರಾ. ಪಂ. ವ್ಯಾಪ್ತಿಯ ನೆರೆ ಸಂತ್ರಸ್ಥರು ಪಂಚಾಯತಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಮುಟ್ಟಾ, ಹಡಿನಬಾಳ, ಬೇರೊಳ್ಳಿ ಗ್ರಾಮಗಳಲ್ಲಿ ಭಾರೀ ಮಳೆ ಹಾಗೂ ಗೇರಸೊಪ್ಪಾ ಡ್ಯಾಂನಿAದ ನೀರು ಬಿಟ್ಟಿದ್ದರಿಂದ ನೆರೆ ಪ್ರವಾಹ ಉಂಟಾಗಿತ್ತು. ನದಿ ದಂಡೆಯ ಹತ್ತಿರ ಇರುವ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು.
ಗ್ರಾ.ಪಂ. ವ್ಯಾಪ್ತಿಯ ಮುಟ್ಟಾ-1, ಹಡಿನಬಾಳ-2, ಕಾವೂರ-1, ಬೇರೊಳ್ಳಿ- ಹೀಗೆ 5 ಕಾಳಜಿ ಕೇಂದ್ರಗಳಲ್ಲಿ ಹಾಗೂ ನಮ್ಮ ನಮ್ಮ ಸಂಭAದಿಕರ ಮನೆಯಲ್ಲಿ ವಾಸ್ತವ್ಯ ಪಡೆದಿದ್ದೇವೆ. ನೆರೆ ಪರಿಹಾರಕ್ಕೆ ಸಂಬAಧಿಸಿದAತೆ ಅಧಿಕಾರಿಗಳು ಹಾನಿಯಾದ ಬಗ್ಗೆ ನಮ್ಮಿಂದ ಅರ್ಜಿ ಮತ್ತು ದಾಖಲೆಗಳನ್ನು ಪಡೆದಿದ್ದರು.
ಪರಿಹಾರಕ್ಕೆ ಅರ್ಜಿ ಎಲ್ಲರಿಂದ ಪಡೆದಿದ್ದರೆ, ಪರಿಹಾರ ಮಾತ್ರ ಕೆಲವರಿಗೆ ನೀಡಲಾಗಿದೆ. ಎಲ್ಲಾ ಅರ್ಜಿದಾರರ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ತಾಲೂಕಾ ಆಡಳಿತಕ್ಕೆ ಕಳಿಸದೇ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಬೇರೊಳ್ಳಿ, ಕಾವೂರು, ಹಾಡಗೇರಿ ಭಾಗದ ನೆರೆ ಸಂತ್ರಸ್ಥರು ಗ್ರಾಮ ಚಾವಡಿ ಹತ್ತಿರ ಜಮಾವಣೆ ಆಗಿದ್ದರು. ಎಷ್ಟು ಹೊತ್ತು ಕಾದರೂ ಗ್ರಾಮ ಲೆಕ್ಕಾಧಿಕಾರಿ ಚಾವಡಿಗೆ ಬರಲಿಲ್ಲ, ಕರೆಯನ್ನು ಸ್ವೀಕಾರ ಮಾಡದ ಕಾರಣ ಸೇರಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಪರಿಸ್ಥಿತಿ ಅರಿತ ತಹಸೀಲ್ದಾರ್ ನಾಗರಾಜ ನಾಯ್ಕಡ, ತಾ.ಪಂ. ಇಒ ಸುರೇಶ ನಾಯ್ಕ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಅಹವಾಲು ಕೇಳಿದರು. ನಾವು ಪರಿಶೀಲನೆ ನಡೆಸುತ್ತೇವೆ. ನೈಜ ನೆರೆ ಸಂತ್ರಸ್ಥರಿಗೆ ಅನ್ಯಾಯವಾದರೆ, ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಹಸೀಲ್ದಾರ್ ಇದೆ ಸಂದರ್ಭದಲ್ಲಿ ಮನವರಿಕೆ ಮಾಡಿದರು.