ಹೊನ್ನಾವರ: ತಾಲೂಕಿನ ಮಂಕಿ ಸಮೀಪ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ವೇಳೆ ಓರ್ವ ಮೀನುಗಾರ ಆಯತಪ್ಪಿ ಸಮುದ್ರದಲ್ಲಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಗಣಪತಿ ನಾಗಪ್ಪ ಖಾರ್ವಿ ಮೃತ ವ್ಯಕ್ತಿ.
ಮಂಕಿ ಮಡಿಯಿಂದ ತನ್ನ ಸಂಬಂಧಿಗಳಾದ ದೇವರಾಜ ಮಂಜುನಾಥ ಖಾರ್ವಿ, ಸಂಜಯ ಈಶ್ವರ ಖಾರ್ವಿ ಜೊತೆಗೆ ಜಯಶ್ರೀರಾಮ ಹೆಸರಿನ ನಾಡದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಬಲೆ ಬಿಡುವ ಸಂದರ್ಭದಲ್ಲಿ ಗಣಪತಿ ನಾಗಪ್ಪ ಖಾರ್ವಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ಹೆಂಡತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕ್ರೈಮ್ ಪಿ ಎಸ್ ಐ ಮುಸಾಹೀದ್ ಅಹಮ್ಮದ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.