ವರದಕ್ಷಿಣೆಯಾಗಿ 7 ಸೀಟಿನ ಕಾರು, 10 ಲಕ್ಷ ರೂ ನೀಡಲಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ ಪತಿ

ಪತಿಯೊಬ್ಬ ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಪತ್ನಿಗೆ ತಲಾಖ್ ನೀಡಿದ್ದಾನೆ. ಆತ 7 ಸೀಟಿನ ಕಾರು ಹಾಗೂ 10 ಲಕ್ಷ ರೂ ವರದಕ್ಷಿಣೆಯನ್ನು ಕೇಳಿದ್ದ ಆದರೆ ಪತ್ನಿಯ ಕುಟುಂಬದವರಿಗೆ ಅದನ್ನು ನೀಡಲು ಸಾಧ್ಯವಾಗಿಲ್ಲ ಹೀಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಸಂತ್ರಸ್ತೆ ಫರ್ಹೀನ್ ಪತಿ ಫೈಸಲ್ ಹಸನ್, ಅತ್ತೆ ಅಖ್ತರಿ ಬೇಗಂ, ಸೋದರ ಅದೀಬ್ ಹುಸೇನ್, ಅರಾಫತ್ ಮತ್ತು ಸೊಸೆ ಕೈನಾತ್ ವಿರುದ್ಧ ಉತ್ತರ ಪ್ರದೇಶದ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫರ್ಹೀನ್ 2019 ರಲ್ಲಿ ಅಜಂಗಢ ರಾಮನಗರ ಕಾಲೋನಿ ನಿವಾಸಿ ಫೈಸಲ್ ಹಸನ್ ಅವರನ್ನು ವಿವಾಹವಾಗಿದ್ದರು. ಫರ್ಹೀನ್ ಪ್ರಕಾರ, ಪೋಷಕರು ನಾಲ್ಕು ಚಕ್ರದ ವಾಹನವನ್ನು ವರದಕ್ಷಿಣೆಯಾಗಿ ನೀಡಿದ್ದರು ಮತ್ತು 25 ಲಕ್ಷ ರೂ. ಕೂಡ ನೀಡಿದ್ದರು.

ಕೆಲವು ದಿನಗಳ ನಂತರ, ಅವರು ಏಳು ಆಸನದ ಕಾರು ಮತ್ತು 10 ಲಕ್ಷ ನಗದು ಬೇಡಿಕೆಯನ್ನು ಪ್ರಾರಂಭಿಸಿದರು. ಬೇಡಿಕೆ ಈಡೇರದಿದ್ದಾಗ ಚಿತ್ರಹಿಂಸೆ ನೀಡುತ್ತಿದ್ದರು. ಜುಲೈ 13, 2022 ರಂದು, ಆಕೆಯ ಪತಿ ಮತ್ತು ಅತ್ತೆ ಅವರನ್ನು ಹೊಡೆದು ಮನೆಯಿಂದ ಹೊರಹಾಕಿದ್ದರು.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಉತ್ತರ ಪ್ರದೇಶ ಪೊಲೀಸರು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ, ಇದನ್ನು ತ್ರಿವಳಿ ತಲಾಖ್ ಕಾನೂನು ಎಂದು ಕರೆಯಲಾಗುತ್ತದೆ.

ತಾಯಿ ಮನೆಗೆ ಹೋಗುವಂತೆ ಒತ್ತಾಯಿಸಿದ್ದರು, ಅತ್ತೆ ಮತ್ತೆ ಪತಿ ಸ್ವಲ್ಪ ದಿನದ ಬಳಿಕ ಕರೆಯುತ್ತಾರೆ ಎಂದು ಭಾವಿಸಿದ್ದಳು, ಆದರೆ ಆಕೆಯ ನಂಬಿಕೆ ಸುಳ್ಳಾಗಿತ್ತು, ವರದಕ್ಷಿಣೆ ನೀಡದಿದ್ದರೆ ಮನೆಗೆ ವಾಪಸ್ ಬರುವಂತಿಲ್ಲ ಎಂದು ಪತಿ ಹೇಳಿದ್ದರು, ಜೂನ್ 18ರಂದು ತಲಾಖ್ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.

ಸಂತ್ರಸ್ತ ಮಹಿಳೆ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.