ಭಾರತೀಯ ಅರಣ್ಯ ಸೇವೆಗೆ ಸುಚೇತ್ ಬಾಳ್ಕಲ್ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸುಚೇತ್ ಬಾಳ್ಕಲ್ UPSC ನಡೆಸುವ ಸಿವಿಲ್ ಸರ್ವಿಸ್ ನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ 30 ನೇ ಗಳಿಸುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿರುತ್ತಾರೆ.

UPSC ನಡೆಸುವ ಸಿವಿಲ್ ಸರ್ವಿಸ್ ನ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಇವರು ಮೈನ್ಸ್ ಮತ್ತು ಸಂದರ್ಶನದಲ್ಲೂ ಜಯಗಳಿಸಿ ಈ ಸಾಧನೆಗೈದಿರುತ್ತಾರೆ.

ಬೆಂಗಳೂರಿನ ಪ್ರಸಿದ್ಧ RV ಇಂಜಿನಿಯರಿಂಗ್ ಕಾಲೇಜು ನಲ್ಲಿ ಪದವಿ ಪಡೆದಿರುವ ಇವರು ಪ್ರತಿಷ್ಠಿತ ಕಂಪೆನಿಗಳಲ್ಲಿ ದೊರೆತ ಕೆಲಸಗಳಿಗೆ ಸೀಮಿತಗೊಳ್ಳದೇ ನಾಗರಿಕ ಸೇವೆಗಳ ಪರೀಕ್ಷಾ ತಯಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ತೊಡಗಿಕೊಂಡಿದ್ದರು.

ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಉತ್ತರ ಕನ್ನಡದ ಚೇತನಾ ಪ್ರಿಂಟರ್ಸ್ ನ ರಾಮಕೃಷ್ಣ ಮತ್ತು ಶ್ರೀಮತಿ ಬಾಳ್ಕಲ್ ಪುತ್ರರಾಗಿರುವ ಇವರು ಈ ಹಿಂದೆ ರಾಜ್ಯ ಮಟ್ಟದ ಕ್ವಿಜ್ ಮತ್ತು ಚರ್ಚೆಗಳಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದನ್ನು ಮತ್ತು SSLC ಪರೀಕ್ಷೆಯಲ್ಲಿ ಯಲ್ಲಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಇವರ ಸಹೋದರಿ ಸಹನಾ ಬಾಳ್ಕಲ್ ಕೂಡ ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಉಪ ಅಯ್ಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು ಒಂದೇ ಕುಟುಂಬದಿಂದ ಇಬ್ಬರು ನಾಗರಿಕ ಸೇವೆಗೆ ಆಯ್ಕೆಯಾಗಿರುವುದು ವಿಶೇಷ