ಶಿರಸಿ: ಇಲ್ಲಿನ ನಿಲೇಕಣಿಯ ಎಸ್.ವಿ.ಎನ್ ಸರಕಾರಿ ಪದವಿ ಪೂರ್ವ ಕಾಲೇಜಿನ 2023 – 2024 ನೇ ಸಾಲಿನ ವಾರ್ಷಿಕ ಪಠ್ಯೇತರ ಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಲಾಯಿತು.
ಕಾಲೇಜಿನ ಹಳೆಯ ವಿದ್ಯಾರ್ಥಿನಿ ಭರತನಾಟ್ಯ ಕಲಾವಿದೆ ಕುಮಾರಿ ಪೂಜಾ ನಾಯ್ಕ ರವರು ದೀಪ ಬೆಳಗಿಸಿ, ಭರತನಾಟ್ಯ ಪ್ರದರ್ಶನ ಮಾಡುವುದರೊಂದಿಗೆ ಕಾಲೇಜು ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ , ‘ಸರ್.ಸಿ.ವಿ ರಾಮನ್’ ವಿಜ್ಞಾನ ವೇದಿಕೆ ಹಾಗೂ ವಿದ್ಯಾರ್ಥಿ ಯುವ ಸಂಸತ್ತಿನ
ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಮನೆಯ ಬಡತನದ ನಡುವೆ ಓದಿನ ಜೊತೆಗೆ ಭರತನಾಟ್ಯದ ಕಲಿಕೆಯನ್ನು ಕೈಗೊಂಡೆ. ಅದು ಈಗ ಆಸರೆಯಾಗಿದೆ.ಸಮಾಜದಲ್ಲಿ ಗೌರವ ದೊರಕುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ನರೇಂದ್ರ ನಾಯಕ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಂಸ್ಕಾರ ಕೊಡುತ್ತವೆ ಆದ್ದರಿಂದ ಈ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು ಹಾಗೂ ರಾಜ್ಯದ ಶಾಸ್ತ್ರ ಉಪನ್ಯಾಸಕ ಉಮೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.
ಹಿರಿಯ ಉಪನ್ಯಾಸಕ ವಿ.ಕೆ.ನಾಯಕ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸರ್ ಸಿ.ವಿ.ರಾಮನ್ ವಿಜ್ಞಾನ ವೇದಿಕೆಯ ಸಂಚಾಲಕರಾದ ಉಪನ್ಯಾಸಕ ದಿವಾಕರ ನಾಯ್ಕ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ನೀಡಿದರು.
ಸಂಸತ್ ಸದಸ್ಯರಾಗಿ ನಿಖಿಲ್ ಎಸ್, ಅರ್ಚನಾ ಎಸ್, ವೇದಾಂತ, ಸ್ಮಿತಾ, ಕಲ್ಪನಾ, ನಿತೀಶ್, ಸನ್ನಿದಿ, ಭವಾನಿ, ಗಜಾನನ, ತೇಜಸ್ವಿನಿ, ಪ್ರದೀಪ್, ಪ್ರಶಾಂತ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಸರ್ ಸಿ.ವಿ.ರಾಮನ್ ವಿಜ್ಞಾನ ವೇದಿಕೆಯ ಸದಸ್ಯರಾಗಿ ಮುಜಾಹಿದ್, ಭಗೀರಥ, ಸ್ವಪ್ನಾ, ಆದರ್ಶ, ಅಶ್ವಿನ್,ವಂದನಾ ಆಯ್ಕೆಗೊಂಡರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ ಭಟ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಉಪನ್ಯಾಸಕಿ ಸ್ಮಿತಾ ಫರ್ನಾಂಡೀಸ್ ವಂದಿಸಿದರು