ಸಿದ್ದಾಪುರ : ಶಿಕ್ಷಣ ಕ್ಕೆ ಒತ್ತು ಕೊಟ್ಟ ರೀತಿಯಲ್ಲಿ ಹಸಿರು ಕ್ರಾಂತಿ ಗೆ ಒತ್ತು ನೀಡಿ ಶಾಸಕ ಭೀಮಣ್ಣ ನಾಯ್ಕ್.

ಸಿದ್ದಾಪುರ: ಪರಿಪೂರ್ಣ ಶಿಕ್ಷಣ ಪಡೆದಾಗ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ, ಶಿಸ್ತು, ಸಮಯಕ್ಕೆ ಆಧ್ಯತೆ ನೀಡುವ ಹವ್ಯಾಸ ಅಳವಡಿಸಿಕೊಳ್ಳುವoತೆ ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.
ಅವರು ತ್ಯಾರ್ಸಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲ್ಲಿ ನಡೆದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್, ಎಸ್, ರೋವರ್ಸ್ ಸ್ಕೌಡ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದರು.
ಗುರು ಶಿಷ್ಯರು ಬಾಂಧವ್ಯ ದಿಂದ ಕೂಡಿರಬೇಕು, ವಿದ್ಯಾರ್ಥಿಗಳು ಶಿಸ್ತು, ಸ್ವಚ್ಛತೆ ಆಧ್ಯತೆ ನೀಡಬೇಕು, ಶಿಕ್ಷಣ ಕ್ಕೆ ಒತ್ತು ಕೊಟ್ಟ ರೀತಿಯಲ್ಲಿ ಹಸಿರು ಕ್ರಾಂತಿ ಗೆ ಒತ್ತು ನೀಡಿ ಗಿಡ ನೆಡುವ ಮೂಲಕ ಪರಿಸರದ ಕಾಳಜಿ ವಹಿಸಬೇಕು ಎಂದರು.
ಅತಿಥಿಯಾಗಿದ್ದ ಅಂಕಣ ಬರಹಗಾರ ಸುರೇಂದ್ರ ದಫೇದಾರ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಯತ್ನ ಮಾಡಬೇಕು, ಪ್ರಯತ್ನ ಪಟ್ಟು ನಿರಂತರವಾಗಿ ಕಾರ್ಯ ಪ್ರವ್ರತ್ತರಾಗಬೇಕು ವೈಜ್ಞಾನಿಕ ಚಿಂತನೆ ಅಳವಡಿಸಿಕೊಂಡು ನಿಮ್ಮ ಹಣೆ ಬರಹ ನೀವೆ ಬರೆದುಕೊಳ್ಳಿ ಎಂದರು.

ಅತಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ವಿದ್ಯಾರ್ಥಿಗಳಾದ ಭಾವನ ಸಂಗಡಿಗರು ಪ್ರಾರ್ಥಿಸಿದರು ಉಪನ್ಯಾಸಕ ಅರುಣ್ ಪ್ರಸಾದ ಸ್ವಾಗತಿಸಿದರು ,ಕಾಲೇಜು ಪ್ರಾಂಶುಪಾಲೆ ರಶ್ಮಿ ಕರ್ಕಿ ಅಧ್ಯಕ್ಷತೆ ವಹಿಸಿದ್ದರು , ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ಮೇಘನಾ, ಶಶಾಂಕ್ ನಿರೂಪಿಸಿದರು.