ಕುದಿಯುತ್ತಿರುವ ಹಾಲಿನಲ್ಲಿ ಹಸುಗೂಸಿನ ಮುಖ ತೊಳೆದ ಅರ್ಚಕ, ಇದೆಂತಹ ಸಂಪ್ರದಾಯ ಎಂದ ನೆಟ್ಟಿಗರು

ಉತ್ತರಪ್ರದೇಶ: ಧಾರ್ಮಿಕ ಆಚರಣೆಯ ಭಾಗವಾಗಿ ಪೂಜಾರಿಯೊಬ್ಬರು ಹಸುಗೂಸಿನ ಮುಖ ಹಾಗೂ ಎದೆಯ ಭಾಗಕ್ಕೆ ಕುದಿಯುತ್ತಿರುವ ಹಾಲಿನ ಕೆನೆಯನ್ನು ಹಚ್ಚುತ್ತಿರುವುದು ವಿಡಿಯೋ ಒಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಈ ವಿಚಿತ್ರ ಆಚರಣೆ ಕಂಡುಬಂದಿದ್ದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಶ್ರವಣಪುರ ಗ್ರಾಮದಲ್ಲಿ ಎಂದು ತಿಳಿದು ಬಂದಿದೆ. ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿವೆ.

ಪೂಜಾರಿಯು ಮಗುವನ್ನು ತನ್ನ ಮೊಣಕಾಲಿನ ಮೇಲೆ ಕೂರಿಸಿಕೊಂಡು, ಕುದಿಯುವ ಹಾಲಿನ ಪಾತ್ರೆಯಿಂದ ನೊರೆಯನ್ನು ತೆಗೆದು ಮಗುವಿನ ಮುಖ ಮತ್ತು ಎದೆಯ ಭಾಗದ ಮೇಲೆ ಹಚ್ಚುತ್ತಿರುವುದನ್ನು ಕಾಣಬಹುದು. ಮಗು ಎಷ್ಟೇ ಬಿಕ್ಕಿ ಬಿಕ್ಕಿ ಅಳುತ್ತಿದ್ದರೂ ಕೂಡ ತನ್ನ ಆಚರಣೆಯನ್ನು ಮಗ್ನನಾಗಿರುವ ಪೂಜಾರಿಯನ್ನು ವಾರಣಾಸಿಯ ಪಂಡಿತ್ ಅನಿಲ್ ಭಗತ್ ಎಂದು ಗುರುತಿಸಲಾಗಿದೆ.