ಅಂಕೋಲಾ: ಹಟ್ಟಿಕೇರಿ ಹಳ್ಳದಲ್ಲಿ ಕಾಡುಕೋಣದ ಕಳೇಬರ ಪತ್ತೆ. ಹಲವು ಶಂಕೆ


ಅಂಕೋಲಾ :ತಾಲ್ಲೂಕಿನ ಹಟ್ಟಿಕೇರಿ (ಪಾಂಡವಾಪುರ) ಹಳ್ಳದಲ್ಲಿ ಭಾರಿ ಗಾತ್ರದ ಕಾಡುಕೋಣದ ಕಳೇಬರ ತಾಲ್ಲೂಕಿನ ಬೆಲೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗ್ರಿಗದ್ದೆಯಲ್ಲಿ ನಡೆದಿದೆ.
ಹಳ್ಳದಲ್ಲಿ ತೇಲಿ ಬಂದಿರಬಹುದಾದ ಶಂಕೆ ಇರುವ ಕಳೇಬರವನ್ನು ಗಮನಿಸಿದ ಸ್ಥಳೀಯರು ಕಾಡುಕೋಣ ಎನ್ನುವುದು ಗೊತ್ತಾಗಿದೆ.
ಮಾಹಿತಿ ತಿಳಿದ ಬೊಗ್ರಿಗದ್ದೆಯ ಕಟ್ಟಿಗೆ ಮಿಲ್ ಸಮೀಪದ ಸೇತುವೆ ಬಳಿ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಅವರ್ಸಾದ ಮಹೇಶ ನಾಯ್ಕ ಮತ್ತು ಗ್ರಾಮಸ್ಥರು ಹಳ್ಳದ ನೀರಿನಲ್ಲಿ ತೇಲಿ ಬಂದಿದ್ದ ಕಾಡುಕೋಣದ ಕಳೇಬರ ನೀರಿನ ಹರಿವಿಗೆ ಮುಂದೆ ಸಾಗದಂತೆ ಹಗ್ಗ ಕಟ್ಟಿ ತಡೆ ಹಿಡಿದಿದ್ದಾರೆ. ನಂತರ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯ ಅಧಿಕಾರಿ ಜಿ. ವಿ ನಾಯ್ಕ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ನಂತರ ಕಾಡುಕೋಣದ ಕಳೇಬರವನ್ನು ನೀರಿನಿಂದ ಹರಸಾಹಸಪಟ್ಟು ಮೇಲೆತ್ತಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ವಾಹನದಲ್ಲಿ ಸಾಗಿಸಲಾಗಿದೆ.

ಕಾಡುಕೋಣದ ಕತ್ತಿನ ಭಾಗದಲ್ಲಿ ಪೆಟ್ಟು ಬಿದ್ದು ರಕ್ತ ಸೋರಿಕೆಯಾದ ಶಂಕೆ ವ್ಯಕ್ತವಾಗಿದೆ. ಕ್ರೂರ ಪ್ರಾಣಿಗಳ ಆಕ್ರಮಣ ಇಲ್ಲವೇ ಬೇಟೆಗಾರರ ಗುಂಡೇಟು ತಗುಲಿ ಮೃತ ಪತ್ತಿರಬಹುದೇ ಎನ್ನುವ ಅನುಮಾನಗಳು ಬಲವಾಗಿ ಕೇಳಿಬರುತ್ತಿವೆ.