ಧಾರವಾಡ: ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹಾವುಗಳು ಮನೆಯೊಳಗೆ ಬರುವ ಘಟನೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಮಿತಿಮೀರಿದ ಶೀತ ವಾತಾವರಣ ಇರೋದ್ರಿಂದ ಹಾವುಗಳು ಮನೆಯೊಳಗೇ ಬಂದುಬಿಡುತ್ತವೆ ಎಂದು ಉರಗ ತಜ್ಞರು ಹೇಳುತ್ತಾರೆ.
ಅದೇ ರೀತಿ ಶೂ ಒಳಗಡೆ ಬೆಚ್ಚಗೆ ಅವಿತು ಕುಳಿತ್ತಿದ್ದ ನಾಗರ ಹಾವಿನ ಮರಿಯನ್ನು ರಕ್ಷಣೆ ಮಾಡಿದ ಘಟನೆ ಧಾರಾವಾಡ ನಗರದ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ನಡೆದಿದೆ
ನಂದಿತಾ ಶಿವನಗೌಡರ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿದೆ. ಕಸ ಗುಡಿಸುವ ವೇಳೆ ಹಾವು ನೋಡಿದ ನಂದಿತಾ ಬೆಚ್ಚಿಬಿದ್ದಿದ್ದಾರೆ. ನಂತರ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲ್ಲಪ್ಪ ಜೋಡಳ್ಳಿ ನಾಗರಹಾವಿನ ಮರಿಯನ್ನ ರಕ್ಷಣೆ ಮಾಡಿದ್ದಾರೆ.
ಶೂ ಹಾಕಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಉರಗ ತಜ್ಞ ಎಲ್ಲಪ್ಪ ಮನವಿ ಮಾಡಿಕೊಂಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಹೀಗಾಗಿ ಶೂ ಧರಿಸುವಾಗ ಸ್ವಲ್ಪ ಜಾಗ್ರತೆ ವಹಿಸಿ ಎಂದು ಸಲಹೆ ನೀಡಿದ್ದಾರೆ.