ಬೆಂಗಳೂರು: ಅಕ್ಕಿ ತಾಪತ್ರಯ ಒಂದುಕಡೆಯಾದರೆ, ಗೃಹಜ್ಯೋತಿಯದ್ದು ಮತ್ತೊಂದು ಕಥೆಯಾಗಿದೆ. ಗೃಹಜ್ಯೋತಿ ಸರ್ವರ್ ಸಮಸ್ಯೆಯಾಗುತ್ತಿದ್ದರೆ, ಮತ್ತೊಂದೆಡೆ ಮನೆ ಯಜಮಾನಿಗೆ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆಬಾಗಿಲು ತೆರೆದುಕೊಳ್ಳೋದೇ ವಿಳಂಬವಾಗುತ್ತಿದೆ. ಗೃಹಜ್ಯೋತಿ ಗೊಂದಲ, ಗದ್ದಲ, ಸರ್ವರ್ ಡೌನ್‌ನಿಂದ ಸಮಸ್ಯೆ ಎದುಆಗಿದೆ. ಇದಕ್ಕೆ ಮುಕ್ತಿ ನೀಡಲು ಸರ್ಕಾರ ಗೃಹ ಲಕ್ಷ್ಮೀ ಯೋಜನೆಗೆ ಪ್ರತ್ಯೇಕ ಆ್ಯಪ್ ಸಿದ್ದಪಡಿಸಿದ್ದು, ಅದರ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ. ಆದ್ರೆ, ಸರ್ಕಾರದ ಅಧಿಕೃತ ಗೃಹಲಕ್ಷ್ಮೀ ಆ್ಯಪ್ ಬಿಡುಗಡೆಗೂ ಮುನ್ನ ನಕಲಿ ಆ್ಯಪ್ ಗಳು ತಲೆ ಎತ್ತಿವೆ.
ಹೌದು.. ಪ್ಲೇಸ್ಟೋರ್ನಲ್ಲಿ ಗೃಹಲಕ್ಷ್ಮೀ ಹೆಸರಿನಲ್ಲಿ ಮೂರು ನಕಲಿ ಆ್ಯಪ್ಗಳು ಪ್ರತ್ಯಕ್ಷವಾಗಿವೆ. 1. ಗೃಹಲಕ್ಷ್ಮಿ ಸ್ಕೀಮ್ ಎನ್ನುವ ಹೆಸರಿನಲ್ಲಿ ಒಂದು ಆ್ಯಪ್ , 2. ಗೃಹ ಲಕ್ಷ್ಮಿ ಯೋಜನಾ ಆ್ಯಪ್ , 3. ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಎನ್ನುವ ಹೆಸರಿಲ್ಲಿ ಒಟ್ಟು ಮೂರು ನಕಲಿ ಆ್ಯಪ್ ಪ್ಲೇ ಸ್ಟೋರಿನಲ್ಲಿ ಪತ್ತೆಯಾಗಿವೆ. ಇವು ನಕಲಿ ಆ್ಯಪ್ ಗಳಾಗಿದ್ದು, ಇದರಿಂದ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ತಪ್ಪಿತಪ್ಪಿ ಈ ನಕಲಿ ಆ್ಯಪ್ಗಳಲ್ಲಿ ಏನಾದರೂ ಉಪಯೋಗಿಸಿದರೆ ನಕಲಿ ಆ್ಯಪ್ ಕಿಂಗ್ಪಿನ್ಗಳು ನಿಮ್ಮ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಗಳಿವೆ.
ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗುತ್ತೆ ಎಂದು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅದರಂತೆ ಸರ್ವರ್ ಸಮಸ್ಯೆಗೆ ಕಡಿವಾಣ ಹಾಕಲು ಇದೀಗ ಸರ್ಕಾರವೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ್ದು, ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೇ ಬಾಕಿ ಇದೆ. ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್ನಲ್ಲಿ ಆ್ಯಪ್ ಲಭ್ಯವಾಗಲಿದೆ. ಇನ್ನೂ ಸೇವಾಸಿಂಧು ವೆಬ್ಸೈಟ್ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು,
BPL, APL, ಅಂತ್ಯೋದಯ ಕಾರ್ಡ್ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ. ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಮನೆ ಒಡತಿಯ ಯಜಮಾನ ಜಿಎಸ್ಟಿ ರಿರ್ಟನ್ಸ್ ಮಾಡಿರಬಾರದು ಎಂಬ ಮಾನದಂಡಗಳನ್ನು ಅನುಸರಿಸಲಾಗಿದೆ.