ಕುಮಟಾ : ವಿದ್ಯಾರ್ಥಿಗಳಿಗೆ ಸ್ವ ಆಧ್ಯಯನ ಹಾಗೂ ಹೊಸತನಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಹೂವು ಹಣ್ಣು ತರಕಾರಿ ವೇಶ ತೊಡಿಸಿ ಅವುಗಳ ಬಗ್ಗೆ ವಿವರಣೆ ನೀಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಎರಡನೇ ವರ್ಗದ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಕಾರ್ಯಕ್ರಮ ನಡೆಸಲಾಯಿತು.
ಪ್ರಕೃತಿಯಲ್ಲಿ ಸಿಗುವ ಸಹಜ ವಸ್ತುಗಳನ್ನು ಬಳಸಿಕೊಂಡು ಈ ಚಟುವಟಿಕೆಯನ್ನು ನಡೆಸಿದ್ದು ವಿಶೇಷವಾಗಿತ್ತು. ಸುಮಾರು 45 ವಿದ್ಯಾರ್ಥಿಗಳು ವಿವಿಧ ರೀತಿಯ ಹೂವು ಹಣ್ಣು ತರಕಾರಿ ವೇಶ ಧರಿಸಿದ್ದರು. ನಂತರ ಆಯಾ ವಸ್ತುಗಳ ವಿವರಣೆ ನೀಡುವ ಮೂಲಕ ನೆರೆದಿದ್ದ ಎಲ್ಲರಿಗೂ ಅಚ್ಚರಿ ಮೂಡಿಸಿದರು.
ತೆಂಗಿನಕಾಯಿ, ಬದನೆಕಾಯಿ, ಸೀಬೆಕಾಯಿ, ದಾಸವಾಳ, ಬಿಲ್ವಪತ್ರೆ, ಲಿಂಬೆಕಾಯಿ ಸೂರ್ಯಕಾಂತಿ, ಸೇಬು, ಕಿತ್ತಳೆ, ಬಾಳೆಹಣ್ಣು, ಅನಾನಸ್ ಮುಂತಾದ ಹೂಹಣ್ಣುಗಳನ್ನು ಹೋಲುವ ಉಡುಗೆ ತೊಡುಗೆಗಳೊಂದಿಗೆ ವಿದ್ಯಾರ್ಥಿಗಳು ಹಾಜರಾಗಿದ್ದು ಪ್ರಮುಖ ಆಕರ್ಷಣೆಯಾಗಿತ್ತು.