ಆಸ್ಪತ್ರೆ ಕೊಡಿ, ಜನರನ್ನು ಬೀದಿಗೆಳೆಯುವ ವಿಕಾಸ ಬೇಡ: ಗಜೇಂದ್ರ ನಾಯ್ಕ್

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ವಿಕಾಸ ಬೇಕು. ಆದರೆ ಜನರನ್ನು ಬೀದಿಗೆಳೆಯುವ ವಿಕಾಸ ಬೇಡ. ಬದಲಿಗೆ ಒಂದು ಮಲ್ಟಿ ಸ್ಪಷಾಲಿಟಿ ಆಸ್ಪತ್ರೆ ಕೊಡಿ ಎಂದು ಉತ್ತರ ಕನ್ನಡ ಜಿಲ್ಲಾ ಪಕ್ಷಾತೀತ ಜನಪರ ವೇದಿಕೆ ಮುಖಂಡ ಡಾ. ಗಜೇಂದ್ರ ನಾಯ್ಕ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಉತ್ತರಕನ್ನಡ ಜಿಲ್ಲೆಗೆ ಅನೇಕ ವರ್ಷಗಳಿಂದ ಬೇಡವೆಂದರೂ ಸರ್ಕಾರದ ಯೋಜನಗಳು ಹುಡಿಕಿಕೊಂಡು ಬರುತ್ತಿವೆ. ಇದರಿಂದ ವಿಕಾಸ ಆಗುವುದು ನಿಜ. ಆದರೆ ಇಲ್ಲಿನ ಲಕ್ಷಾಂತರ ಕುಟುಂಬಗಳು ಇದರಿಂದ ಬೀದಿಗೆ ಬಿದ್ದಿವೆ. ಇಂತಹ ವಿಕಾಸದ ಬದಲಾಗಿ ನಮಗೆ ಸುಸಜ್ಜಿತ ಮಲ್ಟಿ ಸ್ಪಶಾಲಿಟಿ ಆಸ್ಪತ್ರೆ ಕೊಡಿ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ.!

ಸ್ವತಂತ್ರ ದಿನಾಚರಣೆಯ ಒಳಗೆ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗದಿದ್ದರೆ ಆ 16 ರಂದು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಗಜೇಂದ್ರ ನಾಯ್ಕ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ದಿನಕರ ವಾಮನ ನಗರೆಕಾರ, ಚಂದ್ರಕಾಂತ್ ಹರಿಕಂತ್ರ, ಚಂದ್ರಕಾಂತ್ ನಾಯ್ಕ್, ಶಂಕರ್ ಗುನಗಿ, ವೆಂಕಟೇಶ್ ವೇರ್ನೆಕರ, ಜಿಎಸ್ ನಾಯ್ಕ್ ಅನಿಲ್ ಹಾಗೂ ಅಶೋಕ್ ಇದ್ದರು.