ಭಟ್ಕಳ: ಪಟ್ಟಣದ ಪುರಸಭೆ ಅಧಿಕಾರಿಗಳು ಇಂದೂ ಕೂಡಾ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು 20 ಕೆಜಿ ಪ್ಲಾಸ್ಟಿಕ್ ಚೀಲ ಹಾಗೂ 30 ಕೆಜಿ ಪ್ಲಾಸ್ಟಿಕ್ ಇಯರ್ ಬಡ್ಸ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಪುಸರಸಭೆ ಮುಖ್ಯಾಧಿಕಾರಿ ಸುರೇಶ ನೇತೃತ್ವದಲ್ಲಿ ಭಟ್ಕಳ ಬಸ್ ನಿಲ್ದಾಣದಲ್ಲಿರುವ ಅಂಗಡಿ ಹಾಗೂ ಹೋಟೆಲ್‌ಗಳ ಮೇಲೆ ಒಟ್ಟು 3 ಕಡೆಗಳಲ್ಲಿ ದಾಳಿ ನಡೆದಿದೆ.
ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದ್ದರೂ ತಾಲೂಕಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉಪಯೋಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಇವತ್ತೂ ದಾಳಿ ಮುಂದುವರಿಸಿದ್ದಾರೆ.
ಇನ್ನು ನಗರದ ತಾಸೀನ್ ಸೂಪರ್ ಮಾರ್ಕೆಟ್ ನಲ್ಲಿ 30 ಕೆಜಿ ಆಗುವಷ್ಟು ಪ್ಲಾಸ್ಟಿಕ್ ಇಯರ್ ಬಡ್ಸ್ ವಶಪಡಿಸಿಕೊಂಡಿದ್ದಾರೆ. ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯ ಭಟ್ಕಳ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿ ಹಾಗೂ ನಿಲ್ದಾಣದ ಸಮೀಪ ಇರುವ ಗೂಡಗಂಡಿ ಮೇಲೆ ದಾಳಿ ನಡೆಸಿದ್ದಾರೆ.
ನಿನ್ನೆ ಭಾನುವಾರ ಕೂಡಾ ವಾರದ ಸಂತೆ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರಿಂದ 20 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿಸಿಕೊಂಡಿದ್ದರು.
ಈ ವೇಳೆ ಪುರಸಭೆ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಕಂದಾಯ ಅಧಿಕಾರಿ ದಯಾನಂದ, ಮುಟ್ಟಳ್ಳಿ ಪಂಚಾಯತ ಪಿ.ಡಿ.ಓ ರಾಜೇಶ್ವರಿ ಚಂದಾವರ ಹಾಗೂ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.