ತರಬೇತಿ ವಿಮಾನ ಪತನ: ಅಪಾಯದಿಂದ ಪಾರಾದ ಮಹಿಳಾ ಪೈಲಟ್.!

ಮಹಾರಾಷ್ಟ್ರ: ಕಾರ್ವರ್ ಏವಿಯೇಷನ್ ಸಂಸ್ಥೆಗೆ ಸೇರಿದ ತರಬೇತಿ ವಿಮಾನ ಇಂದಾಪುರ ತಾಲೂಕಿನ ಕಡಬನವಾಡಿ ಗ್ರಾಮದ ಜಮೀನಿನಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಮಹಿಳಾ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ತರಬೇತಿ ವಿಮಾನದಲ್ಲಿ ಪೈಲಟ್ ಭವಿಕಾ ರಾಥೋಡ್‌ಗೆ ತರಬೇತಿ ನೀಡಲಾಗುತ್ತಿತ್ತು. ಸೋಮವಾರ ಬೆಳಗ್ಗೆ ಬಾರಾಮತಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ 11 ಗಂಟೆ ಸುಮಾರಿಗೆ ಪತನವಾಗಿತ್ತು.

ವಿಮಾನ ಪತನಗೊಂಡ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಪೈಲಟ್‌ನ್ನ ರಕ್ಷಣೆ ಮಾಡಿದ್ದಾರೆ. ನಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರು. ಘಟನೆ ಕುರಿತು ವಿಮಾನಯಾನ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.