‘ಹೆಜ್ಜೆ ಇಟ್ಟಿಹಳು ದೌಪದಿ’ ಹಾಡಿಗೆ ಮನಸೋತ ದೇಶವಾಸಿಗಳು.!

ಹೊನ್ನಾವರ: ಮಹಾ’ಭಾರತ’ದ ನೂತನ ರಾಷ್ಟ್ರಪತಿ ಹುದ್ದೆ ಅಲಂಕರಿಸಿರುವ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರಿಗೆ ಹೊನ್ನಾವರ ಮಾಳ್ಕೋಡು ಗ್ರಾಮದ ಯುವ ಭಾಗವತೆ ಚಿಂತನ ಹೆಗಡೆ ಯಕ್ಷಗಾನ ಪದ್ಯ ಹಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅವರು ಹಾಡಿರುವ ‘ಹೆಜ್ಜೆ ಇಟ್ಟಿಹಳು ದ್ರೌಪದಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದ್ದು ಭಾರಿ ಮೆಚ್ಚುಗೆಯನ್ನು ಪಡೆದಿದೆ.

‘ಹೆಜ್ಜೆ ಇಟ್ಟಿಹಳು ದ್ರೌಪದಿ ರಾಷ್ಟ್ರಪತಿಯ ಭವನದಲಿ’ ಎಂದು ಯಕ್ಷಗಾನದ ಶೈಲಿಯಲ್ಲಿ ಹಾಡುವ ಮೂಲಕ ದ್ರೌಪದಿ ಮುರ್ಮುಗೆ ಸ್ವಾಗತ ಕೋರಿದ್ದಾಳೆ ಈ ಸಾಹಿತ್ಯವನ್ನು ಉಡುಪಿಯ ಅರವಿಂದ ಚಿಪ್ಲೂಣ್‌ಕರ್ ರಚಿಸಿದ್ದಾರೆ.

‘ಹೆಜ್ಜೆ ಇಟ್ಟಿಹಳು ದ್ರೌಪದಿ ರಾಷ್ಟ್ರಪತಿಯ ಭವನದಲ್ಲಿ ಭಾರತ ಮಹಾಭಾರತವಾಗಲಿ ಧರ್ಮರಾಯನ ನ್ಯಾಯಾಂಗ ಸಂವಿಧಾನವಿಹುದು ಭೀಮ ಬಲದ ಸೇನಾಬಲ ವಿಹುದು’ ಎಂದು ಬಡಗುತಿಟ್ಟು ಶೈಲಿಯಲ್ಲಿ ಚಿಂತನಾ ಹಾಡಿದ್ದಾಳೆ.

ಮಹಾಭಾರತ ಕಥೆಯ ಪ್ರಧಾನ ಪಾತ್ರ ದ್ರೌಪದಿಯ ಹೆಸರಿರುವ ನೂತನ ರಾಷ್ಟ್ರಪತಿಯನ್ನು ಮಹಾಭಾರತ ಪಾತ್ರಗಳಿಗೆ ಅನ್ವಯಿಸುವಂತೆ ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರುವ ರೀತಿ ಸಾಹಿತ್ಯ ರಚಿಸಲಾಗಿದೆ. ಈ ಸಾಹಿತ್ಯವು ಪರಿಹಾರವಾಗಬೇಕಾದ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲಿದೆ. ಸದ್ಯ ಈ ಹಾಡಿನ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.