ಸಿದ್ದಾಪುರ : ತಾಲೂಕಿನ ವಾಜಗೊಡ್ ಮತ್ತು ಕ್ಯಾದಗಿ ಗ್ರಾಮ ಪಂಚಾಯತ ಗಳ ಗಡಿಭಾಗದಲ್ಲಿರುವ ಬಾಳಗೋಡು ಬಸ್ ನಿಲ್ದಾಣದ ಮೇಲ್ಚಾವಣಿಯು ಗಾಳಿ ಮಳೆಗೆ ಮುರಿದು ಬಿದ್ದಿದ್ದು ಈ ಭಾಗದ ಪ್ರಯಾಣಿಕರಿಗೆ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತಿವೆ ಕೂಡಲೆ ದುರಸ್ತಿಗೊಳಿಸುವಂತೆ ಸ್ಥಳೀಯ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಮಳೆಗಾಲವು ಆರಂಭವಾದ ಸಂದರ್ಭದಲ್ಲಿ ಬಸ್ ನಿಲ್ದಾಣವು ಈ ಹಂತಕ್ಕೆ ತಲುಪಿರುವುದು ಬಸ್ ಗಾಗಿ ಬಸ್ ನಿಲ್ದಾಣದಲ್ಲಿ ನಿಂತು ಕಾಯುವಂತಹ ಪ್ರಯಾಣಿಕರಿಗೆ ಮಳೆಯಲ್ಲಿಯೇ ಛತ್ರಿ ಹಿಡಿದುಕೊಂಡು ನಿಲ್ಲುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಪ್ರಯಾಣಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಅರಿತು ಕೂಡಲೆ ಸೂಕ್ತ ರೀತಿಯಾದಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಇನ್ನು ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ